



ಡೈಲಿ ವಾರ್ತೆ: 03/ಜುಲೈ/2025


ಸ್ಕೂಲ್ ಬಸ್ ಚಾಲಕನ ಎಡವಟ್ಟು – ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ

ಬೆಂಗಳೂರು: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಗಣಿಯಲ್ಲಿ ನಡೆದಿದೆ.
ರಸ್ತೆಯ ಇನ್ನೊಂದು ಬದಿ ಇದ್ದ ಶಾಲಾ ವಾಹನ ಏರಲು ಬಾಲಕ ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಆತನಿಗೆ ಡಿಕ್ಕಿಯಾಗಿದೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಕೂಲ್ ಬಸ್ ಚಾಲಕನು ಬಾಲಕ ಓಡಿ ಬರುತ್ತಿರುವುದನ್ನು ನೋಡಿದರೂ ಬಸ್ ನಿಲ್ಲಿಸದೇ ಮುಂದೆ ತೆರಳಿದ್ದಾನೆ. ಇದರಿಂದ ಬಾಲಕ ಆತುರದಿಂದ ರಸ್ತೆ ದಾಟಲು ಮುಂದಾಗಿದ್ದಾನೆ ಎನ್ನಲಾಗುತ್ತಿದೆ.
ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.