



ಡೈಲಿ ವಾರ್ತೆ: 03/ಜುಲೈ/2025


ಕೋಟ| ಸ. ಸಂ. ಪ್ರೌಢ ಶಾಲೆ ಪ್ರಾಥಮಿಕ ವಿಭಾಗ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಸಹಯೋಗದಲ್ಲಿ ಸಂಭ್ರಮದ ಸಾಗುವಳಿ

ಕೋಟ: ಮಣೂರು ಪಡುಕರೆ ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಪ್ರಾಥಮಿಕ ವಿಭಾಗ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಸಹಯೋಗದಲ್ಲಿ ಸಂಭ್ರಮದ ಸಾಗುವಳಿ ಎನ್ನುವ ಕಾರ್ಯಕ್ರಮವನನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ” ಕೃಷಿ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ ಅದರ ಮಧುರಾನುಭವ ಪ್ರತಿಯೊಬ್ಬನು ಅನುಭವಿಸಬೇಕು ಹಾಗಾಗಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಬಹಳ ವಿಚಾರಗಳನ್ನು ತಿಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗೀತಾನಂದ ಸಂಸ್ಥೆಯ ಮುಖ್ಯಸ್ಥರಾದ ದಿವ್ಯಲಕ್ಷ್ಮಿ ಪ್ರಶಾಂತ್ ಕುಂದರ್, ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ ಹೊಳ್ಳ, ಶಾಲಾ ಶಿಕ್ಷಕರು,ಜನತಾ ಸಂಸ್ಥೆಯ ಶ್ರೀನಿವಾಸ ಕುಂದರ್, ರವಿಕಿರಣ, ಪಾಂಡು ಪೂಜಾರಿ, ದೀಕ್ಷಿತಾ, ಅರುಣ್ ಕುಮಾರ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಕ್ಕಳಿಗೆ ಹಿಂದಿನ ಸಂಪ್ರದಾಯಿಕ ತಿಂಡಿ ನೆನಪಿಸುವ ನಿಟ್ಟಿನಲ್ಲಿ ಅವಡೆ ಕಿಚಡಿಯನ್ನು ಸಾಗುವನಿ ಎಲೆಯಲ್ಲಿ ಬಡಿಸಲಾಯಿತು.