



ಡೈಲಿ ವಾರ್ತೆ: 03/ಜುಲೈ/2025


ಬಂಟ್ವಾಳ| ಹೋಟೆಲ್ ಉದ್ಯಮಿ ಹೃದಯಾಘಾತದಿಂದ ಮೃತ್ಯು!

ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ, ಹೋಟೆಲ್ ಉದ್ಯಮಿಯಾಗಿದ್ದ ಇಬ್ರಾಹಿಂ ಬಂಗ್ಲೆಗುಡ್ಡೆ (65) ಅವರು ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾದರು.
ಪಾಣೆಮಂಗಳೂರು – ಆಲಡ್ಕದಲ್ಲಿ ಹಲವು ವರ್ಷಗಳ ಕಾಲ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು ಇತ್ತೀಚೆಗೆ ನಿವೃತ್ತ ಜೀವನ ನಡೆಸುತ್ತಿದ್ದರು. ಗುರುವಾರ ಬೆಳಿಗ್ಗೆ ಹಠಾತ್ ಹೃದಯಾಘಾತಕ್ಕೊಳಗಾದ ಇವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕ್ರಿಯೆ ಗುರುವಾರ ಸಂಜೆ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಿತು.