ಡೈಲಿ ವಾರ್ತೆ: 03/ಜುಲೈ/2025

ಪತ್ರಿಕಾ ವಿತರಕ ಯು.ರಮೇಶ್ ಶೆಣೈ ಅವರಿಗೆ ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ

ಬಂಟ್ವಾಳ : ಪಾಣೆಮಂಗಳೂರು – ಮೆಲ್ಕಾರ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯು.ರಮೇಶ್ ಶೆಣೈ ಅವರನ್ನು ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಇವರು ಕಿವಿ ಕೇಳದ, ಬಾಯಿ ಬಾರದ ನ್ಯೂನತೆಯನ್ನು ಹೊಂದಿದ್ದರೂ ಕಾಯಕವೇ ಕೈಲಾಸ ಎಂದು ಅರಿತುಕೊಂಡು ಶ್ರಮಜೀವಿಯಾಗಿ ಮುನ್ನುಗ್ಗುತ್ತಿರುವ ಇವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.