



ಡೈಲಿ ವಾರ್ತೆ: 05/ಜುಲೈ/2025


ಬಂಟ್ವಾಳ : ಹೆದ್ದಾರಿಗೆ ಉರುಳಿ ಬಿದ್ದ ಬಂಡೆಕಲ್ಲು, ವಾಹನ ಸಂಚಾರಕ್ಕೆ ತೊಡಕು

ಬಂಟ್ವಾಳ : ಬಿ.ಸಿ.ರೋಡು – ವಿಲ್ಲಾಪುರಂ ರಾಷ್ಟೀಯ ಹೆದ್ದಾರಿ ಬಂಟ್ವಾಳ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿ ರಸ್ತೆಯ ಬದಿಯಲ್ಲೇ ಇದ್ದ ಬಂಡೆಕಲ್ಲೊಂದು ಹೆದ್ದಾರಿಗೆ ಉರುಳಿ ಘಟನೆ ಶನಿವಾರ ನಡೆಯಿತು.
ಶನಿವಾರ ಮಧ್ಯಾಹ್ನ ಭಾರಿ ಗಾಳಿ ಮಳೆಗೆ ಮಣ್ಣು ಕುಸಿದ ವೇಳೆ ಬಂಡೆಕಲ್ಲು ರಸ್ತೆಗೆ ಉರುಳಿದೆ ಎನ್ನಲಾಗಿದ್ದು , ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು.
ಬಂಟ್ವಾಳ ಪುರಸಭೆ ಹಾಗೂ ಕಂದಾಯ ಇಲಾಖೆ ವತಿಯಿಂದ ಜೆಸಿಬಿಯಿಂದ ತೆರವು ಕಾರ್ಯ ನಡೆಯಿತು. ಈ ಸಂದರ್ಭ ಪುರಸಭಾ ಸದಸ್ಯ ಹರಿಪ್ರಸಾದ್ , ಕಂದಾಯ ಇಲಾಖಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.