



ಡೈಲಿ ವಾರ್ತೆ: 05/ಜುಲೈ/2025


ಕೋಟ| ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯದರ್ಶನ: ಇತಿಹಾಸದಲ್ಲೇ ಅತೀಹೆಚ್ಚು ಬೆಲೆ ಏರಿಕೆ ಕಂಡಿದ್ದೆ ಬಿಜೆಪಿ ಅವಧಿಯಲ್ಲಿ – ಕಾಂಗ್ರೆಸ್ ಯುವ ನಾಯಕ ಗಣೇಶ್ ನೆಲ್ಲಿಬೆಟ್ಟು

ಕೋಟ: 9/11 ಜಾರಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಪಿಂಚಣಿ ರದ್ದತಿ, ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿಯ ಸುಳ್ಳಿನ ಪ್ರತಿಭಟನೆಗೆ ವಿರುದ್ಧವಾಗಿ ಸತ್ಯದರ್ಶನ ಪ್ರತಿಭಟನೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟ ಗ್ರಾಮ ಪಂಚಾಯತ್ ಎದುರು ಶನಿವಾರ ನಡೆಸಲಾಯಿತು.

ಕಾಂಗ್ರೆಸ್ ಯುವ ನಾಯಕ ಗಣೇಶ್ ನೆಲ್ಲಿಬೆಟ್ಟು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ಇತಿಹಾಸದಲ್ಲೇ ಅತೀಹೆಚ್ಚು ಬೆಲೆ ಏರಿಕೆ ಕಂಡಿದ್ದೆ ಬಿಜೆಪಿ ಅವಧಿಯಲ್ಲಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ ಈ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ನೂರರ ಗಡಿ ದಾಟಿರಲಿಲ್ಲಾ. ಇಂದು ಬಿಜೆಪಿ ಅವಧಿಯಲ್ಲಿ ನೂರರ ಗಡಿ ದಾಟಿ ಇದು ಗಿನ್ನಿಸ್ ದಾಖಲೆಗೆ ಸೇರಬೇಕು.
ಜನ ಸಾಮಾನ್ಯರು ಬಳಸುವ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ವಿಧಿಸಿದ ದಾಖಲೆ ಬಿಜೆಪಿಯದ್ದು. ಬಡವರು ಕುಡಿಯುವ ಒಂದು ಕಪ್ ಚಹಾ ಮೇಲೂ ಸಹಿತ ಜಿಎಸ್ಟಿ ಹಾಕಲಾಗಿದೆ. ಗ್ರಾಮ ಪಂಚಾಯತ್ ಗಳಲ್ಲಿ 25 ಸೆಂಟ್ಸ್ ಗಿಂತ ಕಡಿಮೆ ಇರುವ ಭೂಮಿಗಳಿಗೆ 9&11 ಇ ವಿನ್ಯಾಸ ನಕ್ಷೆಗೆ ಅನುಮೋದನೆ ದೊರೆಯುತ್ತಿತ್ತು. ಆದರೆ 2022 ರಲ್ಲಿ ಬಿಜೆಪಿ ಸರಕಾರ ಅದನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಅಗತ್ಯ ಎಂದು ಆದೇಶ ಹೊರಡಿಸಿತ್ತು. ಆದರೆ ಈಗ ಅದನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಜನರನ್ನು ನಂಬಿಸುವ ಹುನ್ನಾರ ಮಾಡುತ್ತಿದೆ.
ಬಡವರ ಸಂಧ್ಯಾ ಸುರಕ್ಷಾ, ವೃಧ್ದಾಪ್ಯ ವೇತನಗಳ ಪರಿಷ್ಕರಣೆ ಮಾಡಬೇಕು ಎಂದು ಬಿಜೆಪಿ ಸರಕಾರವೇ ಆದೇಶ ಹೊರಡಿಸಿದ್ದು. ಆದರೆ ಇಂದು ಕಾಂಗ್ರೆಸ್ ಸರಕಾರ ಅದನ್ನು ರದ್ದು ಮಾಡುತ್ತದೆ ಎಂದು ಅಮಾಯಕರ ಮನಸ್ಸಲ್ಲಿ ಸುಳ್ಳನ್ನು ಬಿತ್ತುತ್ತಿದೆ.
ಅಕ್ರಮ – ಸಕ್ರಮ ಮಂಜೂರಾತಿಗಾಗಿ ಆ್ಯಪ್ ಮೂಲಕ ಅವೈಜ್ಞಾನಿಕ ಸರ್ವೆಗೆ ಆದೇಶ ಮಾಡಿ, ಅಕ್ರಮ ಸಕ್ರಮದಡಿ ಭೂಮಿ ಮಂಜೂರಾಗದಂತೆ ಮಾಡಿದ್ದು ಇದೇ ಬಿಜೆಪಿ ಸರಕಾರದ ಅವಧಿಯಲ್ಲಿ. ಆದರೆ ಏನೂ ತಿಳಿಯದಂತೆ ಇಂದು ಬಿಜೆಪಿ ನಾಟಕ ಮಾಡುತ್ತಿದೆ ಎಂದು ಗುಡುಗಿದರು.
ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಜನರ ಪರ ಇದ್ದು, ಬಿಜೆಪಿಯ ಸುಳ್ಳಿನ ವಿರುದ್ದ ಜನರನ್ನು ಎಚ್ಚರಿಸಲು ಸತ್ಯದರ್ಶನ ಸಭೆಯನ್ನು ಪ್ರತಿ ಗ್ರಾಮಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರಕಾರ ಅದನ್ನು ಸರಿಪಡಿಸುವಲ್ಲಿ ಕ್ರಮವಹಿಸುತ್ತಿದೆ.
ಹಾಗೆಯೇ ಗ್ರಾಮ ಪಂಚಾಯತ್ ನಲ್ಲಿ ಸರಕಾರದಿಂದ ಜನರಿಗೆ ನೇರ ಉಪಯೋಗ ಆಗುವ ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಉದ್ಯೋಗ ಖಾತ್ರಿ ( ನರೇಗಾ ) ಯೋಜನೆಯನ್ನು ಇಂದಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಳ್ಳ ಹಿಡಿಸುವ ಕಾರ್ಯ ಮಾಡುತ್ತಿದೆ.
ಜನರ ವಯಕ್ತಿಕ ಕೆಲಸಗಳಾದ ಬಾವಿ ನಿರ್ಮಾಣ, ದನದ ಕೊಟ್ಟಿಗೆ ರಚನೆ, ಗೊಬ್ಬರ ಗುಂಡಿ, ಕೋಳಿ ಶೆಡ್, ವಸತಿ ಮನೆ, ಇಂಗು ಗುಂಡಿ ಇತ್ಯಾದಿಗಳನ್ನು ನರೇಗಾ ಅನುದಾನದಲ್ಲಿ ಸುಲಭವಾಗಿ ನಿರ್ಮಿಸುತ್ತಿದ್ದರು.
ಆದರೆ ಈಗ ಹಲವಾರು ನೀತಿ ನಿಯಮಗಳನ್ನು ಹೇರಿ, ಅದರ ಉಪಯೋಗ ಯಾರಿಗೂ ಸಿಗದಂತೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ.
ಕೂಲಿ ಮತ್ತು ಕಚ್ಚಾ ಸಾಮಗ್ರಿ ಹಣಕ್ಕಾಗಿ ಜನರು ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.
ಇಂದು ಸಾರ್ವಜನಿಕ ಕಾಮಗಾರಿ ಮಾಡಲು ಸಾಧ್ಯ ಇಲ್ಲದ ಪರಿಸ್ಥಿತಿ ಬಂದಿದೆ.
ಕೇಂದ್ರ ಸರಕಾರದಿಂದ ಗ್ರಾಮಪಂಚಾಯತ್ ಗಳಿಗೆ ದೊರಕುತ್ತಿದ್ದ 15 ನೇ ಹಣಕಾಸು ಯೋಜನೆಯ ಹಣವನ್ನು ಆರು ವರ್ಷಗಳ ಹಿಂದೆ ಕೋವಿಡ್ ಕಾರಣದಲ್ಲಿ ಶೇ.30 ಕಡಿತ ಮಾಡಿದ್ದರು. ಅದು ಈಗಲೂ ಕಡಿತಗೊಂಡೇ ಬರುತ್ತಿದ್ದು, ಪ್ರತೀ ಗ್ರಾಮಪಂಚಾಯತ್ ಗಳ ಅನುದಾನದಲ್ಲಿ ಪ್ರತಿ ವರ್ಷ ಕೇಂದ್ರ ಸರಕಾರ ಲೂಟಿ ಹೊಡೆಯುತ್ತಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಆಗದೇ ಇರುವ ನೆಪ ಒಡ್ಡಿ, ಅಲ್ಲಿನ ಅನುದಾನವನ್ನೂ ನಿಲ್ಲಿಸಿ, ಆ ಹಣವನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ.
ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನರು ಪೆಟ್ರೋಲ್, ಡಿಸೇಲ್, ಬೇಳೆ ಕಾಳುಗಳು, ಅಡುಗೆ ಎಣ್ಣೆಗಳನ್ನು ಕೊಳ್ಳುವ ಸಾಮರ್ಥ ಕಳೆದುಕೊಂಡಿದ್ದಾರೆ.
ಪ್ರತಿಯೊಂದು ವಸ್ತುವಿನ ಮೇಲೆ ಕೇಂದ್ರ ಸರಕಾರ ವಿಧಿಸುವ ಜಿಎಸ್ಟಿ ಟ್ಯಾಕ್ಸ್ ನಿಂದಾಗಿ ಜನರ ಜೀವನದ ಮೇಲೆ ಹೊಡೆತ ಬಿದ್ದಿದೆ. ಈ ಎಲ್ಲ ಬೆಲೆ ಏರಿಕೆ ಪರಿಣಾಮಗಳಿಂದ
ಜನರ ಜೀವನವು ಕಾಂಗ್ರೆಸ್ ಸರಕಾರ ನೀಡುತ್ತಿರುವ “ಪಂಚ ಗ್ಯಾರಂಟಿ” ಗಳಿಂದ ಸಲ್ಪ ಸುಧಾರಿಸಿದೆ.
ಆದರೆ ಬಿಜೆಪಿ ಸರಕಾರವು ಜನರನ್ನು ಬೇರೆ ವಿಷಯಗಳಿಂದ ಎತ್ತಿಗಟ್ಟಿ ಗ್ಯಾರಂಟಿಗಳನ್ನು ನಿಲ್ಲಿಸಲು ಹುನ್ನಾರ ನಡೆಸುತ್ತಿದೆ.
ಸದಾ ಜನ ಪರ ಆಗಿರುವ ಕಾಂಗ್ರೆಸ್ ಪಕ್ಷ ಜನರಿಗಾಗಿಯೇ ಆಡಳಿತ ನಡೆಸಿದೆ. ಇಂದೂ ರಾಜ್ಯದಲ್ಲಿನೂ ಜನಪರ ಆಡಳಿತ ನಡೆಸುತ್ತಿದೆ, ಮುಂದೆಯೂ ನಡೆಸುತ್ತದೆ. ಹಾಗೆ ಸ್ಥಳೀಯ ಕೋಟ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ವಿಷಯಗಳ ಮಾಹಿತಿಗಳ ಕೊರತೆಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ವಿರುದ್ಧ ಬಾಯಿ ಬಂದ ಹಾಗೆ ಮಾತನಾಡಿದರ ಬಗ್ಗೆ ಅವರ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದರು.
ಕೋಟ ಪಂಚಾಯತ್ ನಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದು ಕಳೆದ ಎರಡು ವರ್ಷಗಳಿಂದ ಯಾವುದೇ ಗ್ರಾಮ ಸಭೆ ನಡೆಸಿಲ್ಲ. ಹಾಗೆ ಕೋಟ ಪಂಚಾಯತ್ ವ್ಯಾಪ್ತಿಯಲ್ಲಿ ಯಾವದೇ ಚರಂಡಿಗಳ ಕ್ಲೀನ್ ಮಾಡಿ ಹೂಳು ಎತ್ತಿಲ್ಲ, ಎಸ್. ಸಿ & ಎಸ್.ಟಿ ಚೆಕ್ ಗಳು ಇನ್ನು ಪಾಸ್ ಆಗದೆ ಇನ್ನು ನೆನೆಗುದ್ದಿಗೆ ಬಿದ್ದಿವೆ ಇದರ ಬಗ್ಗೆ ನಿಮ್ಮ ಉತ್ತರ ಏನು ಎಂದು ಪ್ರಶ್ನೆ ಮಾಡಿದರು. ಹಾಗೆ ಕಾಂಗ್ರೆಸ್ ನ ಎಲ್ಲ ಪಂಚ ಗ್ಯಾರಂಟಿಗಳನ್ನು ಅನುಭವಿಸುತ್ತಾ ಇದ್ದು, ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಎಲ್ಲ ಸವಲತ್ತುಗಳನ್ನು ಅನುಭವಿಸಿ, ಈವಾಗ ಬಡವರ ಪಕ್ಷ ಕಾಂಗ್ರೆಸ್ ಪಕ್ಷವನ್ನ ಬಿಟ್ಟು ಶ್ರೀಮಂತ ಬಿಜೆಪಿ ಪಕ್ಷಕ್ಕೆ ಪಲಾಯನ ಗೈದು ನಿಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಮಾತಾಡೋ ಯಾವ ನೈತಿಕತೆ ನಿಮಗೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕರ್ ಎ ಕುಂದರ್, ಜಯಪ್ರಕಾಶ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ತಿಮ್ಮ ಪೂಜಾರಿ, ಚಂದ್ರ ಆಚಾರ್ ಕೋಟ, ದಿನೇಶ್ ಬಂಗೇರ, ಅಚ್ಚುತ್ ಪೂಜಾರಿ, ಶಿವ ಪೂಜಾರಿ ಕೋಟ, ಗಣೇಶ್ ಕೋಟ, ಶಿವ ಪೂಜಾರಿ ಪಡುಕೆರೆ, ದೇವದಾಸ್ ಕಾಂಚನ್, ವಸಂತ್ ಮಣ್ಣೂರು, ಜೀವನ್ ಕದ್ರಿಕಟ್ಟು, ನಾರಾಯಣ ಮೆಂಡನ್ ಮಣ್ಣೂರು, ಸದಾನಂದ್ ಗಿಳಿಯಾರ್, ಉಮೇಶ್ ಕೋಟ, ಡಾ. ಕೃಷ್ಣ ಕಾಂಚನ್, ಪ್ರೇಮ ಗಣೇಶ್ ಮೆಂಡನ್ ಬೆಟ್ಲಕ್ಕಿ, ದೇವೇಂದ್ರ ಗಾಣಿಗ ಕೋಟ, ಸುರೇಶ್ ಕಚ್ಕೆರೆ, ರವಿ ಕುಮಾರ್ ಕೋಟ, ರತ್ನಾಕರ್ ಶ್ರೀಯಾನ್, ಮಹಾಬಲ ಮಡಿವಾಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.