


ಡೈಲಿ ವಾರ್ತೆ: 15/ಜುಲೈ/2025


ಉಡುಪಿ| ಖಾಸಗಿ ಬಸ್ ಗಳೆರಡು ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ

ಉಡುಪಿ: ಖಾಸಗಿ ಬಸ್ಸು ಗಳೆರಡು ಮುಖಾಮುಖಿ ಹೊಡೆದು ಹಲವರು ಪ್ರಯಾಣಿಕರು ಗಾಯ ಗೊಂಡ ಘಟನೆ ಎಂಜಿಎಂ ಬಳಿ ಜು. 15 ರಂದು ಮಂಗಳವಾರ ಬೆಳಗ್ಗೆ ನಡೆದಿದೆ.
ಮಣಿಪಾಲದಿಂದ ಉಡುಪಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ಸು ಹಾಗೂ ಉಡುಪಿಯಿಂದ ಮಣಿಪಾಲಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್ಸುಗಳ ನಡುವೆ ಅಪಘಾತ ನಡೆದಿದೆ.
ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸಂಚಾರ ಠಾಣೆಯ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಿಂದಾಗಿ ಕೆಲವು ಹೊತ್ತು ಸಂಚಾರ ದಟ್ಟನೆ ಕಂಡುಬಂದು. ಸ್ಥಳೀಯರು ದಟ್ಟನೆ ನಿಯಂತ್ರಿಸಲು ಯತ್ನಿಸಿದರು.