


ಡೈಲಿ ವಾರ್ತೆ: 16/ಜುಲೈ/2025


ಜುಲೈ 17 ರಂದು ಸಜೀಪನಡು ಗ್ರಾಮ ಪಂಚಾಯತ್ ನಿಂದ ನಿರ್ಲಕ್ಷ್ಯ ಮತ್ತು ದುರಾಡಳಿತ ವಿರೋಧಿಸಿ ಧರಣಿ

ಬಂಟ್ವಾಳ : ಸಜೀಪನಡು ಗ್ರಾಮ ಪಂಚಾಯತ್ ನಿಂದ ಮೂಲಭೂತ ಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಮತ್ತು ದುರಾಡಳಿತ ವಿರೋಧಿಸಿ ಸದಸ್ಯ ನಾಸೀರ್ ಸಜೀಪ ಅವರಿಂದ ಜುಲೈ 17 ರಂದು ಪಂಚಾಯತ್ ಕಚೇರಿ ಮುಂಭಾಗ ಧರಣಿ ನಡೆಯಲಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿದ್ದು ಪಂಚಾಯತ್ ನಿಂದು ಇದಕ್ಕೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ 10 ರಿಂದ ತನ್ನ ಬೇಡಿಕೆ ಈಡೇರುವವರೆಗೂ ಧರಣಿ ನಡೆಸಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯ ನಾಸೀರ್ ಸಜೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.