


ಡೈಲಿ ವಾರ್ತೆ: 22/ಜುಲೈ/2025


ಕುಂದಾಪುರ| ಧಾರಾಕಾರ ಮಳೆಗೆ ಮನೆ ಸಂಪೂರ್ಣ ಕುಸಿತ – ಲಕ್ಷಾಂತರ ರೂ.ನಷ್ಟ

ಕುಂದಾಪುರ: ಕುಂದಾಪುರ ತಾಲೂಕು ಕುಂದಬಾರಂದಾಡಿಯ ರಾಘವೇಂದ್ರ ಜೋಗಿ ಎಂಬವರ ಮನೆ ಗಾಳಿ,ಮಳೆಗೆ ಕುಸಿದು ಸಂಪೂರ್ಣ ಹಾನಿಗೊಂಡಿದ್ದು, 10 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಅಲ್ಲದೇ ಈ ನಿರಂತರ ಮಳೆಗೆ ಹಾರ್ದಳ್ಳಿ-ಮಂಡಳ್ಳಿಯ ಭುಜಂಗ ಶೆಟ್ಟಿ ಎಂಬವರ ಮನೆಯೂ ಭಾಗಶ: ಹಾನಿಗೊಂಡಿದ್ದು 25,000ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿಯ ಭಾಗದಲ್ಲಿ ಜುಲೈ 27ರವರೆಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆ ಸುರಿಯಲಿದ್ದು ‘ಯೆಲ್ಲೋ ಅಲರ್ಟ್’ ಸೂಚನೆ ನೀಡಿದೆ.