ಡೈಲಿ ವಾರ್ತೆ: 23/ಜುಲೈ/2025

NNO ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಕುಂದಾಪುರ: ಏನ್. ಏನ್. ಒ. ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮರಣ ಶಕ್ತಿ, ಪರೀಕ್ಷೆ ಎದುರಿಸುವುದು ಹೇಗೆ ಪಿಯುಸಿ ಆದ ನಂತರ ಮುಂದೇನು ಮಾಡಬೇಕು, ಹಾಗೂ ಸ್ಕೋಲರ್ಷಿಪ್ ವಿತರಣಾ ಕಾರ್ಯಕ್ರಮ ಗಂಗೊಳ್ಳಿ ಯಾ ತೌಹೀದ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯಿತು.

ಜ್ಞಾನ, ಕೌಶಲ್ಯ, ಹಾಗು ಜೀವನ ಮೌಲ್ಯಗಳನ್ನು ಹೆಚ್ಚಿಸುವುದು ವಿದ್ಯಾಭ್ಯಾಸ ದ ಮೂಲ ಆಶಯ ಆದರೆ ಕೆಲಯೊಂದು ಕಾರಣದಿಂದಾಗಿ
ಸಾರ್ವರ್ತಿಕ ಸಾಕ್ಷಾರತೇ ಸಾಧ್ಯವಾಗುತ್ತಿಲ್ಲ, ಏನ್ ಏನ್ ಒ ಕಮ್ಯುನಿಟಿ ಸೆಂಟರ್ ಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ.
ಸ್ವಂತ ಶಾಲೆಯನ್ನು ಆರಂಭಿಸುದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಇಂಥ ತರಬೇತಿ ಕಾರ್ಯಕ್ರಮ ದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುದರ ಮೂಲಕ ಅವರನ್ನು ಪ್ರೇರಣೆ ನೀಡಬೇಕು ಹಾಗು ಮೊಬೈಲ್ ನ್ನು ಅವಶ್ಯಕತೆ ಇದ್ದಲ್ಲಿ ಮಾತ್ರ ಉಪಯೋಗಿಸಬೇಕು, ಹೆಚ್ಚು ಉಪಯೋಗಿಸಿದರಿಂದ ಆಗುವ ಅನಾಹುತ ದ ಬಗ್ಗೆ ಮಾಹಿತಿ ಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಕಾರ್ಯಕ್ರಮ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷ ತೆಯನ್ನು ಏನ್ ಏನ್ ಒ ಕಮ್ಯುನಿಟಿ ಸೆಂಟರ್ ನ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ವಹಿಸಿದರು.
ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು,
ಏನ್ ಏನ್ ಒ ಘಟಕದ ಖಜಾಂಚಿ ಪೀರು ಸಾಹೇಬ್, ಏನ್ ಏನ್ ಒ ಕುವೈಟ್ ಘಟಕದ ಅಧ್ಯಕ್ಷ ಅಶ್ರಫ್ ಹಂಗಾರಕಟ್ಟೆ, ಏನ್ ಏನ್ ಒ ಉಡುಪಿ ಜಿಲ್ಲಾ ಸದ್ಯಸ್ಯರಾದ, ಅಬ್ದುಲ್ ಖಾದರ್ ಮೂಡ್ ಗೋಪಾಡಿ, ಹಾರೂನ್ ರಶೀದ್ ಸಾಸ್ತಾನ್, ಮನ್ಸೂರ್ ಇಬ್ರಾಹಿಂ ಅಕ್ರಮ್ ಉಡುಪಿ, ಕಾಲೇಜ್ ಮೆನೇಜರ್ ತಾಹಿರ್ ಹಾಸನ್, ಪ್ರಿನ್ಸಿಪಾಲ ರಾದ ಸಮಿನ ಇನ್ನಿತರರು ಉಪಸ್ಥಿತರಿದ್ದರು.
ವಲಯ ತರಬೇತುದಾರರಾದ ಕೆ. ಶಿವರಾಮ ತರಬೇತಿ ನೀಡಿದರು,
ಕಾಲೇಜು ಉಪನ್ಯಾಸಕಿ ಬಿಂದು ಕಾರ್ಯಕ್ರಮ ನಿರೂಪಿಸಿ ತನುಜಾ ವಂದಿಸಿದರು.