ಡೈಲಿ ವಾರ್ತೆ: 31/ಜುಲೈ/2025

ಕೋಟತಟ್ಟು ಗ್ರಾ. ಪಂ. ಕಾರಂತ ಥೀಮ್ ಪಾರ್ಕ್ ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ

ಕೋಟ: ಕೋಟ ಗ್ರಾಮ ಪಂಚಾಯತ್ ಕಾರಂತ ಥೀಮ್ ಪಾರ್ಕ್ ಗೆ ಜು.31 ರಂದು ಉಡುಪಿ ಜಿಲ್ಲಾಧಿಕಾರಿ ಮಾನ್ಯ ಸ್ವರೂಪ ಟಿ ಕೆ ಅವರು ಭೇಟಿ ನೀಡಿದರು.
ಅವರು ಮಾತನಾಡಿ ಒಂದು ಗ್ರಾಮ ಪಂಚಾಯತ್ ಕಾರಂತ ಥೀಂ ಪಾರ್ಕ್ ಅನ್ನು ನಿವೃಹಿಸುತ್ತಿರುವುದು ಒಂದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು. ಹಾಗೂ ಇನ್ನೂ ಉತ್ತಮ ಕಾರ್ಯಕ್ಕೆ ಬೆಂಬಲ ನೀಡುವ ಬಗ್ಗೆ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಶ್ರೀಮತಿ ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಕಂದಾಯ ನಿರೀಕ್ಷಕರಾದ ಮಂಜುನಾಥ ಬಿಲ್ಲವ, ಗ್ರಾಮಾಡಳಿತಧಿಕಾರಿ ಶ ಚೆಲುವರಾಜು, ಹಾಗೂ ಸಿಬ್ಬಂದಿಗಳು ಉಪಸ್ತಿತರಿದ್ದರು.