ಡೈಲಿ ವಾರ್ತೆ: 01/ಆಗಸ್ಟ್/ 2025

ಕಿನ್ನಿಗೋಳಿ| ಎರಡು ಕಾರುಗಳ ನಡುವೆ ಅಪಘಾತ – ಮಗು ಸಹಿತ ಮೂವರು ಗಂಭೀರ

ಕಿನ್ನಿಗೋಳಿ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ಸಂಭವಿಸಿದೆ.

ಗಾಯಗೊಂಡವರನ್ನು
ಕುಂದಾಪುರದ ತೆಕ್ಕಟ್ಟೆ ನಿವಾಸಿಗಳಾದ ನಿತಿಲ್‌(25), ಅವಿನಾಶ್(23), ಮಗು ಮೃತ್ವಿನ್(2) ಎಂದು ತಿಳಿದು ಬಂದಿದೆ.
ಇನ್ನೊಂದು ಕಾರಿನಲ್ಲಿದ್ದ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ರಭಸಕ್ಕೆ ಎರಡು ಕಾರು ಪಲ್ಟಿಯಾಗಿದ್ದು ಕೆಲ ಹೊತ್ತು ಸಂಚಾರ ವ್ಯತ್ಯಯ ಕಂಡುಬಂದಿತ್ತು. ಅಪಘಾತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.