


ಡೈಲಿ ವಾರ್ತೆ: 01/ಆಗಸ್ಟ್/ 2025


ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬಂಗಾರ ಪದಕ ಗೆದ್ದ ಕೋಟದ ಹೆಮ್ಮೆಯ ಕುವರ ದಿನೇಶ್ ಗಾಣಿಗ

ಕೋಟ: ನೇಪಾಳ ರಂಗಶೀಲ ಸ್ಟೇಡಿಯಂನಲ್ಲಿ ಜು. 26 ರಿಂದ 27 ತನಕ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಕೋಟದ ಹೆಮ್ಮೆಯ ಕುವರ ದಿನೇಶ ಗಾಣಿಗರವರು ಚಿನ್ನದ ಪದಕ ಗೆದ್ದಿದ್ದಾರೆ.
ವೇಗ ನಡಿಗೆ, ಗುಂಡೆಸೆತ, ಲಾoಗ್ ಜಂಪ್‌ನಲ್ಲಿ ಭಾಗವಹಿಸಿ, 5 ಕಿಲೋಮೀಟರ್ ವೇಗ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದು ಕ್ರೀಡಾ ಲೋಕದಲ್ಲಿ ಹೊಸ ತಾರೆಯಾಗಿ ಮಿನುಗುತ್ತಿದ್ದಾರೆ.

ಈ ಹಿಂದೆ ಥೈಲ್ಯಾoಡ್ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನದ ಪದಕ, ಹರ್ಡಲ್ಸ್ನಲ್ಲಿ ದ್ವಿತೀಯ ಒಂದು ಬೆಳ್ಳಿ ಪದಕ ಮತ್ತು ವೇಗ ನಡಿಗೆಯಲ್ಲಿ ತೃತೀಯ ಕಂಚು ಪದಕ ಹಾಗೂ 2021 ಸಿಂಗಾಪುರ, 2022 ಮಲೇಷಿಯಾ ಹಾಗೂ2023ರಲ್ಲಿ ಶ್ರೀಲಂಕಾ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾಗಿದ್ದಾರೆ. ಅಲ್ಲದೆ ಅವರ ತವರೂರು ಕೋಟ ಪುಳಕಗೊಂಡಿದೆ.