ಡೈಲಿ ವಾರ್ತೆ: 04/ಆಗಸ್ಟ್/ 2025

ಕೊಪ್ಪಳ| ಯುವಕನ ಬರ್ಬರ ಕೊಲೆ – ಹತ್ಯೆಗೆ ಮುಳುವಾಯ್ತು ಪ್ರೀತಿ!

ಕೊಪ್ಪಳ: ಪ್ರೇಮ ಪ್ರಕರಣದಲ್ಲಿ ಯುವಕನು ಬರ್ಬರವಾಗಿ ಕೊಲೆಯಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಕೊಪ್ಪಳ ನಗರದ ಜನತೆಯು ಬೆಚ್ಚಿ ಬೀಳುವಂತೆ ಮಾಡಿದೆ.

ಕೊಲೆಯಾದ ದುರ್ದೈವಿಯನ್ನು ಕುರಬರ ಓಣಿಯ ಗವಿಸಿದ್ದಪ್ಪ ನಿಂಗಪ್ಪ ವಾಲ್ಮೀಕಿ(26) ಎಂದು ಗುರಿಸಲಾಗಿದೆ. ಈ ಯುವಕನು ಪ್ರೇಮಾಂಕುರದಲ್ಲಿ ತೊಡಗಿದ್ದನಂತೆ. ಆದರೆ ಈತನು ರಾತ್ರಿ 8 ಗಂಟೆ ಸುಮಾರಿಗೆ ನಗರದ ನಿರ್ಮಿತಿ ಕೇಂದ್ರದ ಸಮೀಪದ ಮಸೀದಿ ಬಳಿ ಭೀಕರವಾಗಿ ಕೊಲೆಯಾಗಿದ್ದಾನೆ. ಈ ಯುವಕನನ್ನು ಸಾದೀಕ್ ಹುಸೇನ್ ಕೋಲ್ಕರ್ ಎಂಬ ಆರೋಪಿ ಕೊಲೆ ಮಾಡಿದ್ದಾನೆ.

ಗವಿಸಿದ್ದಪ್ಪ ವಾಲ್ಮೀಕಿ ನಿರ್ಮಿತಿ ಕೇಂದ್ರದ ಬಳಿ ಬಂದಾಗ ಸಾದಿಕ್ ಎನ್ನುವಾತ ಲಾಂಗ್ ನಿಂದ ಗವಿಸಿದ್ದಪ್ಪನ ಕುತ್ತಿಗೆಗೆ ಹೊಡೆದಿದ್ದು ಆತನ ಪ್ರಾಣ ಸ್ಥಳದಲ್ಲಿಯೇ ಹಾರಿ ಹೋಗಿದೆ.

ಘಟನೆ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ.ರಾಮ್ ಎಲ್‌ ಅರಸಿದ್ದಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಸ್ಥಳದಲ್ಲಿ ಲಾಂಗ್ ದೊರೆತಿದ್ದು, ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಘಟನೆಯು ಕೊಪ್ಪಳದ ಜನತೆ ಬೆಚ್ಚಿ ಬೀಳುವಂತಾಗಿದೆ.

ಈ ಕೊಲೆ ಪ್ರಕರಣದ ಕುರಿತು ಎಸ್ಪಿ ಡಾ. ರಾಮ್ ಅರಸಿದ್ದಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿ, ಇದೊಂದು ಪ್ರೇಮ ಪ್ರಕರಣ ಎನ್ನುವ ಪ್ರಾಥಮಿಕ ಮಾಹಿತಿ ದೊರೆತಿದೆ. ವಯಕ್ತಿಕ ಕಾರಣಕ್ಕೆ ಈ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದೆ.