


ಡೈಲಿ ವಾರ್ತೆ: 06/ಆಗಸ್ಟ್/ 2025


“ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರದ ಸಂಸ್ಥಾಪಕ ಡಾ.ರಾಘವೇಂದ್ರ ಉಳ್ಳೂರ ರವರಿಗೆ ಸನ್ಮಾನ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುಳ್ಳುಗುಡ್ಡೆಯ “ಧರ್ಮಸಿಂಧು ಸ್ಪಿರಿಚುವಲ್ ಲೈಫ್” ಆಧ್ಯಾತ್ಮ ಕೇಂದ್ರದ ಸಂಸ್ಥಾಪಕ ಡಾ.ರಾಘವೇಂದ್ರ ಉಳ್ಳೂರ ರವರಿಗೆ ವಿಶೇಷ ಸಾಧನೆಯನ್ನು ಗುರುತಿಸಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ), ಉಡುಪಿ ಜಿಲ್ಲೆ. ಇವರ ವತಿಯಿಂದ ಭಾರತೀಯ ಸಂಸ್ಕೃತಿ, ಜೀವ ವೈವಿಧ್ಯ, ಪ್ರಕ್ರತಿ ದತ್ತ ಔಷಧಿಗಳ ಬಳಕೆ ಹಾಗೂ ಆಧ್ಯಾತ್ಮಿಕ ಸಾಧನೆಗಳನ್ನು ಗುರುತಿಸಿ ಆ. 4 ರಂದು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ, ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ವೈದ್ಯ.ಅನಗಾಳು ಕೃಷ್ಣಮೂರ್ತಿ, ಉಪ ಕಾರ್ಯದರ್ಶಿಗಳಾದ ಕುಮಾರಿ ಉಮಾದೇವಿ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಹರೀಶ ಸಾಮಗ,
69 ಬಾರಿ ರಕ್ತದಾನ ಮಾಡಿರುವ ಸಾಲಿಗ್ರಾಮದ ಶ್ರೀನಿವಾಸ ಮಯ್ಯ, ಮತ್ತು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ನಾಟಿ ವೈದ್ಯರುಗಳು ಬಾಗಿಯಾಗಿದ್ದರು.