


ಡೈಲಿ ವಾರ್ತೆ: 08/ಆಗಸ್ಟ್/ 2025


ಟೋಲ್ ಸಿಬ್ಬಂದಿಯನ್ನು ರಸ್ತೆಯಲ್ಲಿ ಎಳೆದುಕೊಂಡ ಹೋದ ಟಾಟಾ ಏಸ್ ಚಾಲಕ!

ಬೆಂಗಳೂರು: ಟೋಲ್ ಸಿಬ್ಬಂದಿಯನ್ನು ಎಳೆದುಕೊಂಡು ರಸ್ತೆಯಲ್ಲಿ ಡೆಡ್ಲಿ ರೈಡ್ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ನಡೆದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿಯಲ್ಲಿ ಟಾಟಾ ಏಸ್ ಚಾಲಕ ಟೋಲ್ ಪಾವತಿ ಮಾಡಿರಲಿಲ್ಲ. ಹೀಗಾಗಿ ಮುಂದಕ್ಕೆ ಸಾಗಿದಾಗ ಸಿಬ್ಬಂದಿ ಡ್ರೈವರ್ ಬಳಿಯ ಡೋರ್ ಹಿಡಿದಿದ್ದಾರೆ.
ಡೋರ್ ಹಿಡಿದಿದ್ದರೂ ಚಾಲಕ ಮುಂದಕ್ಕೆ ಚಲಿಸಿದ್ದಾನೆ. ಈ ವೇಳೆ ಸಿಬ್ಬಂದಿ ಕಾಲನ್ನು ಮೇಲಕ್ಕೆ ಎತ್ತಿ ಡೋರ್ ಅನ್ನು ಬಲವಾಗಿ ಹಿಡಿದು ನೇತಾಡಿದ್ದಾರೆ. ಎಲ್ಲಾ ಸಿಬ್ಬಂದಿ ನೇತಾಡಿಕೊಂಡಿದ್ದರೂ ಏಸ್ ಚಾಲಕ ಕ್ಯಾರೇ ಅನ್ನದೇ ನಡು ರಸ್ತೆಯಲ್ಲಿ ಡೆಡ್ಲಿ ರೈಡ್ ಮಾಡಿದ್ದಾನೆ. ಕೊನೆಗೆ ಸಿಬ್ಬಂದಿ ಸುಸ್ತಾಗಿ ರಸ್ತೆಗೆ ಬಿದ್ದಿದ್ದಾರೆ.
ಈ ಎಲ್ಲಾ ದೃಶ್ಯಗಳು ಹಿಂದೆ ಇದ್ದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.