


ಡೈಲಿ ವಾರ್ತೆ: 09/ಆಗಸ್ಟ್/ 2025


ಕೋಟ| ಬೈಕ್ ಗೆ ಲಾರಿ ಡಿಕ್ಕಿ – ಶಿಕ್ಷಕ ಗಂಭೀರ

ಕೋಟ: ತೆಕ್ಕಟ್ಟೆಯಿಂದ ಕೋಟ ಕಡೆಗೆ ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರನೋರ್ವರಿಗೆ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರಿನಲ್ಲಿ ಶುಕ್ರವಾರ ನಡೆದಿದೆ.
ಬೈಕ್ ಸವಾರ ಮಣೂರು ಪಡುಕರೆಯ ಶಿಕ್ಷಕ ಸಂತೋಷ್ ಗಂಭೀರ ಗಾಯಗೊಂಡ ವ್ಯಕ್ತಿ. ಇವರು ಸುಜ್ಞಾನ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸಂತೋಷ್ ಅವರು ತೆಕ್ಕಟ್ಟೆಯಿಂದ ಕೋಟ ಕಡೆಗೆ ಬರುವಾಗ ಮಣೂರು ಸಮೀಪ ತನ್ನ ಸ್ನೇಹಿತನೊಂದಿಗೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಪರಾರಿ ಆಗಿದೆ.
ಬೈಕ್ ಸವಾರ ಸಂತೋಷ್ ಗೆ ತಲೆ ಮತ್ತು ಮುಖ ಕೈಗಳಿಗೆ ಗಂಭೀರ ಗಾಯಗಳಾಗಿದ್ದು.
ತಕ್ಷಣ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಕಿಶೋರ್ ಶೆಟ್ಟಿ ಸೇರಿ ಅಂಬುಲೆನ್ಸ್ನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಕೋಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.