ಡೈಲಿ ವಾರ್ತೆ: 16/ಆಗಸ್ಟ್/ 2025

ಮಾಣಿ: ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ : ಮಾಣಿ ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ಸೂರಿಕುಮೇರ್ ಬಿ.ಎಂ.ಆರ್ ಪೆಟ್ರೋಲ್ ಬಂಕ್ ಬಳಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಧ್ವಜಾರೋಹಣಗೈ ಫೆಡರೇಶನ್ ಗೌರವ ಸಲಹೆಗಾರ ಹನೀಫ್ ಖಾನ್ ಕೊಡಾಜೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ದೇಶದ ಕಟ್ಟ ಕಡೆಯ ಪ್ರಜೆಗೆ ಸಾಮಾಜಿಕ ನ್ಯಾಯ ಇನ್ನೂ ಮರೀಚಿಕೆಯಾಗಿದೆ. ಬಡವರು ತಿನ್ನುವ ಆಹಾರದ ಮೇಲೂ ತೆರಿಗೆ ಹಾಕುವ ಆಡಳಿತ ವ್ಯವಸ್ಥೆ ವಿರುದ್ಧ ಇನ್ನೊಂದು ಹೋರಾಟ ನಡೆಸಲು ಜನರು ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಜನರು ಪರಸ್ಪರ ಸೌಹಾರ್ದದಿಂದ ಬದುಕಿದಾಗ ಮಾತ್ರ ಸ್ವಾತಂತ್ರ್ಯ ಹೋರಾಟಗಾರ ತ್ಯಾಗಕ್ಕೆ ಅರ್ಥ ಬರುತ್ತದೆ ಎಂದರು.

ಸೂರಿಕುಮೇರ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮೂಸಾ ಕೆರೀಂ, ಅಶ್ರಫ್ ಸಖಾಫಿ, ಝಕರಿಯಾ, ಸಿದ್ಧೀಕ್ ನೆಡ್ಯಾಲ್, ಶಾಫಿ ಸೂರಿಕುಮೇರ್ ಭಾಗವಹಿಸಿದ್ದರು.

ಲತೀಫ್ ಕೊಡಾಜೆ ಸ್ವಾಗತಿಸಿ, ರಿಯಾಝ್ ಕಲ್ಲಾಜೆ ವಂದಿಸಿದರು. ಝೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.