ಡೈಲಿ ವಾರ್ತೆ: 16/ಆಗಸ್ಟ್/ 2025

ಕಲ್ಲಡ್ಕ : ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಸಾಧಕರಿಗೆ ಸನ್ಮಾನ

ಬಂಟ್ವಾಳ : ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಖ್ಯಾತಿಗಳಿಸಿದ ಅಹಮದ್ ಮಿಕ್ದಾದ್ ಮಾತನಾಡಿ , ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳನ್ನು ವೃತ್ತಿಯಾಗಿ ಆಯ್ಕೆ ಮಾಡಿದಾಗ ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗಬಹುದು ಎಂದ ಅವರು ತಮ್ಮ ಕಲಾ ಕೌಶಲ್ಯವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಅನುಗ್ರಹ ಮಹಿಳಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಯಾಸೀನ್ ಬೇಗ್ ಅಧಕ್ಷತೆ ವಹಿಸಿದ್ದರು.

ಮಂಗಳೂರು ಎನಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಡಿಪಾರ್ಟ್ಮೆಂಟ್ ಜೆರಿಯಾಟ್ರಿಕ್ ಮೆಡಿಸಿನ್ ವಿಭಾಗದ ಸೀನಿಯರ್ ರಿಸರ್ಚ್ ಫೆಲೋ ಅಶ್ರ ಬಿ., ಕಲ್ಲಡ್ಕ ಮ್ಯೂಸಿಯಂನ ಕೆ.ಎಸ್. ಯಾಸೀರ್, ಅನುಗ್ರಹ ವಿದ್ಯಾಸಂಸ್ಥೆಯ ಸಂಚಾಲಕ ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಇಮರತ್ ಅಲಿ, ಕೋಶಾಧಿಕಾರಿ ಹೈದರ್ ಅಲಿ, ಅನುಗ್ರಹ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಮುಕ್ತಾರ್ ಅಹಮದ್, ಆದಮ್, ಇಸ್ಮಾಯಿಲ್, ಇದಿನಬ್ಬ ಕೊಪ್ಪಳ, ಮುತ್ತಲಿಬ್ ಬಿ. ಸಿ ರೋಡ್, ಅಬ್ದುಲ್ ಹಮೀದ್ ವಿ.ಕೆ, ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ನಾಯಕಿ ಕುಮಾರಿ ಸಲ್ಮಾ ನವಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮಾಡಿದ ಅಹಮದ್ ಮಿಕ್ದಾದ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ., ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಹೈಫ ಪಾತಿಮ ಕಿರಾತ್ ಪಠಿಸಿದರು, ಕುಮಾರಿ ಆಯಿಷತ್ ಕುಬ್ರ ಮತ್ತು ಬಳಗ ದೇಶಭಕ್ತಿ ಗೀತೆಯನ್ನು ಹಾಡಿದರು, ತೃತೀಯ ಬಿ.ಎ. ವಿಭಾಗದ ಕುಮಾರಿ ಸಾರ ಶಹಮ ಸ್ವಾಗತಿಸಿ, ತೃತೀಯ ಬಿ.ಎ. ವಿಭಾಗದ ಕುಮಾರಿ ಯು.ಕೆ ಸಂಶೀರ ವಂದಿಸಿದರು, ತೃತೀಯ ಬಿ.ಕಾಂ ವಿಭಾಗದ ಕುಮಾರಿ ಮೆಹಶೂಕ ಕಾರ್ಯಕ್ರಮ ನಿರೂಪಿಸಿದರು.