ಡೈಲಿ ವಾರ್ತೆ: 19/ಆಗಸ್ಟ್/ 2025

79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಮೆನ್ ಇಂಡಿಯಾ ಮೂವ್ಮೆಂಟ್ ( WIM ) ವತಿಯಿಂದ ಕ್ರೀಡಾಕೂಟ

ಉಳ್ಳಾಲ,: 79 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಮೆನ್ ಇಂಡಿಯಾ ಮೂವ್ಮೆಂಟ್ ( WIM ) ಮುನ್ನೂರು ಬ್ರಾಂಚ್ ಹಾಗೂ ಬೆಲ್ಮ ಬ್ರಾಂಚ್ ವತಿಯಿಂದ ಕ್ರೀಡಾಕೂಟವು ನಾಟೆಕಲ್ ಗ್ರೀನ್ ಪ್ರಿನ್ಸ್‌ ಕ್ರೀಡಾಂಗಣದಲ್ಲಿ ಮುನ್ನೂರು ಬ್ರಾಂಚ್ ಅಧ್ಯಕ್ಷೆ ಝರೀನಾ ನವಾಝ್ ಕುತ್ತಾರ್ ರವರ ಅಧ್ಯಕ್ಷತೆಯಲ್ಲಿ ” ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆ ಗೋಲು ” ಎಂಬ ಘೋಷ ವಾಕ್ಯದೊಂದಿಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಮೆನ್ ಇಂಡಿಯಾ ಮೊಮೆಂಟ್ ಉಳ್ಳಾಲ ಕ್ಷೇತ್ರ ಅಧ್ಯಕ್ಷೆ ಶಬ್ರೀನಾ ಉಳ್ಳಾಲ ಕ್ರೀಡಾಕೂಟವನ್ನು ಉದ್ಘಾಟಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ದ ಭಾರತೀಯ ಮಹಿಳೆಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ ಇಂತಹ ಹೋರಾಟಗಳನ್ನು ಮಾಡಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಸದೃಢವಾಗಿದ್ದರು ಹಾಗೆಯೇ ನಾವು ಕೂಡ ಅವರ ಮಾರ್ಗದರ್ಶನದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಬೇಕು ಮತ್ತು ಕ್ರೀಡಾ ಮನೋಭಾವ ಬೆಳೆಸಬೇಕೆಂದು ಹೇಳಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಲ್ಮ ಬ್ರಾಂಚ್ ಅಧ್ಯಕ್ಷೆ ಅಸ್ಮ ಖಾಸಿಂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾಧಕ ವ್ಯಸನದ ಹಿಂದೆ ಬಿದ್ದಿದ್ದು ಮಾಧಕ ದ್ರವ್ಯಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ನಾಗರೀಕನೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಮಾದಕ ದ್ರವ್ಯಗಳ ವ್ಯಸನವು ವ್ಯಕ್ತಿಯ ಜೀವನದ ಮೇಲೆ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಾದಕ ದ್ರವ್ಯಗಳ ದುರುಪಯೋಗ ತಡೆಗಟ್ಟಲು ಶಿಕ್ಷಣ, ಜಾಗೃತಿ, ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವುದು ಅವಶ್ಯಕ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಾಯಕಿಯರಾದ ಶಲುಲಾ ಅವೀಝ್,ಝೀನತ್ ಮಂಚಿ, ಪೈನಾಝ್ ಮುನೀರ್,ಸಫ್ವಾನ RKC, ಅಸ್ಮ RKC ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಕ್ಚಿಝ್ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ಕ್ರೀಡಾಪಟುಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಯಿಶಾ ಬಿಂತ್ ಯುಸೂಫ್ ಸ್ವಾಗತಿಸಿದರು ,ಅಸ್ಮ RKC ಧನ್ಯವಾದಗೈದರು.