


ಡೈಲಿ ವಾರ್ತೆ: 19/ಆಗಸ್ಟ್/ 2025


ಶ್ರೀ ಗುರು ಮಾರುತಿ ಮಹಿಳಾ ಭಜನಾ ಮಂಡಳಿ ಸಾಲಿಗ್ರಾಮವತಿಯಿಂದ ಕುಣಿತ ಭಜನೆಯ ಪಾದಾರ್ಪಣಾ ಮತ್ತು ಗುರು ವಂದನಾ ಕಾರ್ಯಕ್ರಮ

ಕೋಟ: ಶ್ರೀ ಗುರು ಮಾರುತಿ ಮಹಿಳಾ ಭಜನಾ ಮಂಡಳಿ ಸಾಲಿಗ್ರಾಮ ಇದರ. ಕುಣಿತ ಭಜನೆಯ ಪಾದಾರ್ಪಣಾ ಮತ್ತು ಗುರು ವಂದನಾ ಕಾರ್ಯಕ್ರಮವು ಆಗಸ್ಟ್ 18 ರಂದು ಶ್ರೀ ಅಘೋರೇಶ್ವರ ದೇವಸ್ಥಾನ ದ ಸಭಾಭವನ ದಲ್ಲಿ ನಡೆಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸುಕನ್ಯ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಅಘೋರೇಶ್ವರ ದೇವಳದ ಪ್ರಧಾನ ಅರ್ಚಕರಾದ ವಿಧ್ವಾನ್ ಬಾಲಕೃಷ್ಣ ನಕ್ಷತ್ರಿ ಯವರು ದೀಪ ಪ್ರಜ್ವಲನೆಗೈದು ತಂಡಕ್ಕೆ ಶುಭ ಹಾರೈಸಿದರು.
ಭಜನಾ ತಂಡದ ಗುರುಗಳಾದ ಜಯಕರ ಪೂಜಾರಿ ಗುಳ್ವಾಡಿಯವರಿಗೆ ತಂಡದಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು, ತಂಡದ ಪ್ರಥಮ ಸೇವೆಯಾಗಿ ದೇವಸ್ಥಾನ ದ ಸಭಾಭವನ ದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಜನಾ ಮಂಡಳಿ ಗೌರಾವಧ್ಯಕ್ಷರಾದ ಎಮ್ ಪ್ರಪುಲ್ಲ, ಅಧ್ಯಕ್ಷೆ ಶಾಲಿನಿ ಯು, ಕಾರ್ಯದರ್ಶಿ ವಿಶ್ಮಿತಾ, ಕೋಶಾಧಿಕಾರಿ ಭುವನ, ನಿಶ್ವಾರ್ಥ ಸೇವಾ ಟ್ರಸ್ಟಿನ ಪ್ರದೀಪ್ ಪೂಜಾರಿ, ರೋಟರಿ ಕ್ಲಬ್ ಕೋಟದ ಮಾಜಿ ಅಧ್ಯಕ್ಷರಾದ ಶ್ರೀ ಮಾಧವ ಪೂಜಾರಿ ಗೆಂಡೆಕೆರೆ,ಪಿ ಎಮ್ ಕೃಷ್ಣ ಪಾರಂಪಳ್ಳಿ ಹಾಗೂ ಮಂಡಳಿ ಯ ಸದಸ್ಯರು ಹಾಜರಿದ್ದರು.