ಡೈಲಿ ವಾರ್ತೆ: 02/ಸೆ./2025

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ – ಸ್ಟೈಲ್ ಟಿವಿ ತಂಡದಿಂದ ತೆರವು

ಹೆಬ್ರಿ: ಭಾರೀ ಗಾಳಿಮಳೆಯಿಂದಾಗಿ ಉಡುಪಿ- ಶಿವಮೊಗ್ಗ ಸಂಪರ್ಕಿಸುವ ಆಗುಂಬೆ ಘಾಟಿ 166 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.2 ರಂದು ಮುಂಜಾನೆ ಆಗುಂಬೆ ಘಾಟಿಯ ಮೇಲ್ಭಾಗದ 8ನೇ ತಿರುವಿನಲ್ಲಿ ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ತಕ್ಷಣ ಕುಂದಾಪುರ ಸ್ಟೈಲ್ ಟಿವಿ ತಂಡ ಮರವನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.