ಡೈಲಿ ವಾರ್ತೆ: 02/ಸೆ./2025

ಅಂಬಲಪಾಡಿಯಲ್ಲಿ ಭೀಕರ ಅಪಘಾತ: ಟ್ರಕ್ ಹರಿದು ಬೈಕ್ ಸವಾರ ದಾರುಣ ಸಾವು

ಉಡುಪಿ: ಹದಿನಾಲ್ಕು ಚಕ್ರಗಳ ಬೃಹತ್ ಗಾತ್ರದ ಟ್ರಕ್ ಹರಿದು, ಬೈಕ್ ಸವಾರ ಮೃತಪಟ್ಟಿರುವ ಘಟನೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಸೋಮವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ದೆಂದೂರುಕಟ್ಟೆಯ ಪ್ರದೀಪ (38) ಎಂದು ಗುರುತಿಸಲಾಗಿದೆ.

ಈತ ಅಂಬಲಪಾಡಿ ಸುರಭಿ ಅಟೋಮೊಬೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ‌ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತ ಸವಾರನ ತಲೆ ಭಾಗವು ಛಿದ್ರಗೊಂಡಿದ್ದು ಅಪಘಾತ ಸ್ಥಳದಿಂದ ಸುಮಾರು ನೂರು ಮೀಟರ್ ದೂರ ಟ್ರಕ್ ಎಳೆದು ಸಾಗಿದ್ದು ಅಪಘಾತದ ಭೀಕರತೆ‌ ತೋರಿಸಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಪೋಲಿಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಇಲಾಖೆಗೆ‌ ನೆರವಾದರು.