


ಡೈಲಿ ವಾರ್ತೆ: 02/ಸೆ./2025


ಉಡುಪಿ| ಭಿಕ್ಷಾಟನೆ ನಿರತ ಅಪ್ರಾಪ್ತ ಬಾಲಕರ ರಕ್ಷಣೆ

ಉಡುಪಿ: ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇರ್ವರು, ಅಪ್ರಾಪ್ತ ಬಾಲಕರನ್ನು ನಗರದ ಸಿಟಿ ಸೆಂಟರ್ ಮಾಲ್ ಬಳಿ ರಕ್ಷಿಸಿರುವ ಘಟನೆ ಭಾನುವಾರ ನಡೆದಿದೆ.
ಕಾರ್ಯಚರಣೆಯಲ್ಲಿ ಮಕ್ಕಳ ಸಹಾಯವಾಣಿ 1098 ಕೇಸ್ ವರ್ಕರ್ ಲಕ್ಷ್ಮೀಕಾಂತ್, ಸೌಮ್ಯ, ರೈಲ್ವೆ ಚೈಲ್ಡ್ ಹೆಲ್ತ್ ಡೆಸ್ಕ್ ಸಿಬ್ಬಂದಿ ವಿಶಾಲ್, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಭಾಗಿಯಾಗಿದ್ದರು.
ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮೌಖಿಕ ಆದೇಶದ ಮೆರೆಗೆ, ದೊಡ್ಡಣಗುಡ್ಡೆಯ ಬಾಲಕರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುರ್ನವಸತಿ ಕಲ್ಪಿಸಲಾಗಿದೆ.