


ಡೈಲಿ ವಾರ್ತೆ: 02/ಸೆ./2025


ಪುತ್ತೂರು ಗಣೇಶೋತ್ಸವದಲ್ಲಿ ಈದ್ ಮಿಲಾದ್ ಪ್ರಯುಕ್ತ ಸಿಹಿ ತಿಂಡಿ ವಿತರಿಸಿ ಸೌಹಾರ್ದತೆ ಮೆರೆದ ಮುಸ್ಲಿಂ ಮುಖಂಡರು

ಪುತ್ತೂರು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕಿಲ್ಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಕೊನೆಯ ದಿನವಾದ ಮಂಗಳವಾರ ನಡೆದ ಅನ್ನ ಸಂತರ್ಪಣೆ ವೇಳೆ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಮುಖಂಡರು ಸಿಹಿ ತಿಂಡಿ ವಿತರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಕೆಪಿಸಿಸಿ ಮುಖಂಡ ಹನೀಫ್ ಬಗ್ಗುಮೂಲೆ, ಪುತ್ತೂರು ಮಿಲಾದ್ ಸಮಿತಿ ಉಪಾಧ್ಯಕ್ಷ ಸಿದ್ದೀಕ್ ಸೂರ್ಯ, ಕೊಡಾಜೆ ಐಕ್ಯ ವೇದಿಕೆಯ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ಸಾಮಾಜಿಕ ಮುಖಂಡರಾದ ಗಫೂರ್ ಪಾಟ್ರಕೋಡಿ ಹಾಗೂ ಶಬ್ಬೀರ್ ಅಳಕೆಮಜಲು ಸಿಹಿತಿಂಡಿ ವಿತರಣೆಯ ನೇತೃತ್ವ ವಹಿಸಿದ್ದರು.