ಡೈಲಿ ವಾರ್ತೆ: 02/ಸೆ./2025

ಬಿಜೆಪಿ ಅವರು ವಾಮಾಮಾರ್ಗದ ಮೂಲಕ ಅಧಿಕಾರಕ್ಕೆ ಬರುವುದೇ ಅವರ ಅಜೆಂಡಾ – ನಾಗೇಂದ್ರ ಪುತ್ರನ್

ಉಡುಪಿ: ಬಿಜೆಪಿಯವರು ಅಧಿಕಾರಕ್ಕೆ ಬಂದಾಗಲೆಲ್ಲ ದೇಶದ ಹಾಗೂ ರಾಜ್ಯದ ಜನತೆಗೆ ಸುಳ್ಳು ಅಜೆಂಡದ ಸಂದೇಶ ನೀಡಿ ಅಧಿಕಾರಕ್ಕೆ ಬಂದಿರುವುದೇ ಹೆಚ್ಚು.

ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಕೇವಲ ಹಿಂದುತ್ವದ ವಿಚಾರ ಹಿಡಿದು ಧರ್ಮರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಯಾತ್ರೆ ಮಾಡಿರುವ ಬಿಜೆಪಿಗೆ ಜನ ಸೇರಿಸಲು ಸಾಧ್ಯ ಆಗದೆ ಮುಖಬಂಗ ಆಗಿದೆ.
ನಿಜವಾದ ಹಿಂದೂಗಳು ಯಾರು ಕೂಡ ಬಿಜೆಪಿಗೆ ಮಣೆ ಹಾಕದೆ, SIT ತನಿಖೆ ಹಾಗೂ ಹಿಂದೂ ಯುವತಿ ಸೌಜನ್ಯ ಪರ ಧ್ವನಿ ಆಗಿರುವುದು ಕಂಡು ಬಂದಿದೆ.

ನಿಜವಾದ ಹಿಂದೂಗಳು ಈ ಬಿಜೆಪಿಯ ಡುಬ್ಲಿಕೇಟ್ ಹಿಂದುತ್ವವನ್ನು ಯಾರೂ ನಂಬೋದಿಲ್ಲ ಅನ್ನುವುದಕ್ಕೆ ಧರ್ಮಸ್ಥಳ ಧರ್ಮ ಸಂರಕ್ಷಣೆ ಯಾತ್ರೆಯೇ ಸಾಕ್ಷಿ ಆಗಿದೆ.

ಜೆಡಿಎಸ್ ರಾಜ್ಯದ ಯುವ ಅಧ್ಯಕ್ಷರು ನಿಖಿಲ್ ಕುಮಾರ್ ಸ್ವಾಮಿ ಮೊದಲು ನೂರಾರು ಹೆಣ್ಣು ಮಕ್ಕಳ, ಬಲಾತ್ಕಾರ ಮಾಡಿರುವ ಅವನ ಸ್ವಂತ ಸಂಬಂಧಿ ಪ್ರಜ್ವಲ್ ರೇವಣ್ಣನ ಮನೆಗೆ ಯಾತ್ರೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲಿ ಆಮೇಲೆ ಧರ್ಮ ಸಂರಕ್ಷಣಾ ಯಾತ್ರೆ ಮಾಡಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಕಿಡಿಕಾರಿದ್ದಾರೆ.