


ಡೈಲಿ ವಾರ್ತೆ: 02/ಸೆ./2025


ಅಖಿಲ ಭಾರತ ಕೊಂಕಣಿಖಾರ್ವಿ ಸಮಾಜ ವತಿಯಿಂದ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ಪಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದ ಡಾ. ಸತೀಶ್ ಖಾರ್ವಿಗೆ ಅಭಿನಂದನೆ

ಕುಂದಾಪುರ: ಅಖಿಲ ಭಾರತ ಕೊಂಕಣಿಖಾರ್ವಿ ಸಮಾಜ ವತಿಯಿಂದ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ಪಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದ ಡಾ. ಸತೀಶ್ ಖಾರ್ವಿಗೆ ಸೆ.2 ರಂದು ತ್ರಾಸಿ ಯಲ್ಲಿರುವ ಅಖಿಲ ಭಾರತ ಕೊಂಕಣಿಖಾರ್ವಿ ಸಮಾಜ ಭವನದ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಅಲ್ಲದೆ ಅಕ್ಟೋಬರ್ ನಲ್ಲಿ ಸೌತ್ ಆಫ್ರಿಕಾ ಕ್ಯಾಟ್ ಟೌನ್ ನಡೆಯುವ ಮಾಸ್ಟರ್ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದಕ್ಕೆ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಶುಭಕೋರಿ ಆಶೀರ್ವದ ಮಾಡಿದರು.

ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷರಾದ ರವಿ ಟಿ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಿತಂಬರ್ ಸದಾನಂದ ಖಾರ್ವಿ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.