


ಡೈಲಿ ವಾರ್ತೆ: 04/ಸೆ./2025


ಎಕ್ಸಲೆಂಟ್ ಕುಂದಾಪುರದಲ್ಲಿ ಸೆ.7 ರಂದು “ಮುದ್ದು ಕೃಷ್ಣ ಸ್ಪರ್ಧೆ

ಭಗವಂತ ಮಹಾವಿಷ್ಣುವಿನ ‘ದಶಾವತಾರ’ಗಳಲ್ಲಿ ಎಂಟನೆಯ ಅವತಾರಿಯಾಗಿ ದ್ವಾಪರ ಯುಗದ ಮಥುರಾ ನಗರದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನದಂದು (ಅಷ್ಟಮಿ) ದೇವಕಿ-ವಸುದೇವರಿಗೆ ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ 12ಗಂಟೆಗೆ ಸರಿಯಾಗಿ ಶ್ರೀಕೃಷ್ಣ ಪರಮಾತ್ಮನು ಜನಿಸಿದ ಈ ಪುಣ್ಯ ದಿನದ ಪ್ರಯುಕ್ತ ನಾಡಿನಾದ್ಯಂತ “ಶ್ರೀ ಕೃಷ್ಣ ಜನ್ಮಾಷ್ಟಮಿ” ದಿನವನ್ನು ಸೆಪ್ಟೆಂಬರ್ 7ರಂದು ಆಚರಿಸುತ್ತಾರೆ.
ಅದರಲ್ಲೂ ಉಡುಪಿ ಜಿಲ್ಲೆಯ ಕೇಂದ್ರಬಿಂದುವಾದ ಈ ಸಡಗರದ ‘ಶ್ರೀ ಕೃಷ್ಣಜನ್ಮಾಷ್ಟಮಿ’ ದಿನದ ಅಂಗವಾಗಿ ಸೆಪ್ಟೆಂಬರ್ 7ರಂದು ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ’ಯನ್ನು ಈ ನಾಡಿನ ಚಿಣ್ಣರಿಗೆ ಹಮ್ಮಿಕೊಂಡಿರುತ್ತೇವೆ.
ಈ ಸಂಸ್ಥೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 3ವರ್ಷದೊಳಗಿನ ಹಾಗೂ 3ವರ್ಷ ಮೇಲ್ಪಟ್ಟು 6 ವರ್ಷದೊಳಗಿನ ಮಕ್ಕಳಿಗೆ ಸಂಸ್ಥೆಯ ನಿಯಮಗಳಿಗನುಗುಣವಾಗಿ ಪ್ರಥಮ 7೦೦೦/-, ದ್ವಿತೀಯ 5೦೦೦/-, ತೃತೀಯ 3೦೦೦/- ಗಳೊಂದಿಗೆ ನಡೆಸಲು ತೀರ್ಮಾನಿಸಿದ್ದೇವೆ.
ಭಾಗವಹಿಸುವ ಪ್ರತಿ ಮಗುವಿಗೂ ಸಹ ಪ್ರಶಂಸನಾ ಪತ್ರದೊಂದಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಸಂಕಲ್ಪವನ್ನು ಮಾಡಿರುತ್ತೇವೆ. ನಮ್ಮ ಈ ನಾಡಿನ ಸಮಸ್ತ ಜನತೆಯು ಈ ಭಗವಂತನ ಲೀಲೆಗಳನ್ನು ಪ್ರಚುರಪಡಿಸುವ ಈ ನಮ್ಮ ಎಕ್ಸಲೆಂಟ್ ಆವರಣದ ವೇದಿಕೆಯ ಚಿಣ್ಣರ ಅಂಗಳಕ್ಕೆ ಆಗಮಿಸುವಂತೆ ಆತ್ಮೀಯ ಕರೆಯೋಲೆಯನ್ನು ನೀಡುತ್ತಿದ್ದೇವೆ.
ಬನ್ನಿ ನಿಮ್ಮ ಮಕ್ಕಳೊಂದಿಗೆ ಈ ಸುಂದರ ಕಾರ್ಯಕ್ರಮವನ್ನು ಚಂದಗಾಣಿಸಿ ಎನ್ನುವ ಆಶಯಗಳೊಂದಿಗೆ, ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿ ವರ್ಗದವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು & ಹೈಸ್ಕೂಲ್ ಸುಣ್ಣಾರಿ, ಕುಂದಾಪುರ.