


ಡೈಲಿ ವಾರ್ತೆ: 03/ಸೆ./2025


ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಸಾಲಿಗ್ರಾಮ ಶಾಖೆ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

ಸಾಲಿಗ್ರಾಮ: ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಸಾಲಿಗ್ರಾಮ ಶಾಖೆ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮವು ಸೆ. 3 ರಂದು ಬುಧವಾರ ಬೆಳಿಗ್ಗೆ ವಡ್ಡರ್ಸೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ಸಾಲ ಉಸೂಲಾತಿ ವಿಭಾಗದ ಸಹಾಯಕ ಮಹಾಪ್ರಬಂಧಕರಾದ ಕರುಣಾಕರ ದಾಸ್ ಮಾತನಾಡಿ ಗ್ರಾಹಕರಿಗೆ ಬಹುಬೇಗ ಬೆಳೆಯುತ್ತಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರು ಎದುರಿಸುತ್ತಿರುವ ಸವಾಲುಗಳು ಮತ್ತು ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಇವರವಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ APY, PMJJBY, ಮತ್ತು PMSBY ಬಗ್ಗೆ ಮಾಹಿತಿಯನ್ನು ನೀಡಿದರು. ನಮ್ಮ ಬ್ಯಾಂಕಿನಲ್ಲಿ ಇರುವ ಕೆಲವು ಯೋಜನೆಗಳಾದ ಅಪಘಾತ ವಿಮೆ ಬಗ್ಗೆ ಸಂಚಯ ಖಾತೆ ಹೊಂದಿರುವವರಿಗೆ ಹಾಗೂ ಠೇವಣಿ ಸಾಲದ ಬಗ್ಗೆ ಆಧಾರ್ ಲಿಂಕ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು. ಹಾಗೂ ಬ್ಯಾಂಕಿನಿಂದ ನೀಡಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ವ್ಯವಸ್ಥಾಪಕರಾದ ಸಿಪ್ರಿಯನ ಲೂಯಿಸ್ ವಹಿಸಿದ್ದರು.
ಈ ಸಂದರ್ಭದಲ್ಲಿ ವಡ್ಡರ್ಸೆ ಪಿಡಿಒ ಉಮೇಶ್, ವಡ್ಡರ್ಸೆ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್
ಪಂಚಾಯತ್ ಸದಸ್ಯರುಗಳಾದ ಕುಶಾಲ್ ಶೆಟ್ಟಿ, ರೇಖಾ ಶರತ್ ಶೆಟ್ಟಿ,ಚಂದ್ರ ಶೆಟ್ಟಿ, ಕೋಟಿ ಪೂಜಾರಿ ಮತ್ತು
ಸಂಘದ ಪ್ರೇರಕಿಯರು ಬೇಬಿ, ಭವಾನಿ, ಸುಶೀಲ
ಶಾಖಾ ಸಿಬಂದಿ ಸುರೇಖಾ ಶೆಡ್ತಿ ಮತ್ತು ಲೋಹಿತ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ರೋಹಿಣಿ ಎನ್ ಸ್ವಾಗತಿಸದರು.
ಅನ್ನಪೂರ್ಣ ಎಂ.ಎ. ವಂದಿಸಿದರು.