


ಡೈಲಿ ವಾರ್ತೆ: 10/ಸೆ./2025


ಬೈಕಂಪಾಡಿ| ಧಗಧಗನೇ ಹೊತ್ತಿ ಉರಿದ ಸುಗಂಧ ದ್ರವ್ಯ ತಯಾರಕಾ ಕಂಪೆನಿ – ಅಪಾರ ನಷ್ಟ

ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಕಾ ಕಂಪೆನಿಗೆ ಬುಧವಾರ ಮುಂಜಾವು 5 ಗಂಟೆ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿ ಅಪಾರ ನಷ್ಟ ಸಂಭವಿಸಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಂಸಿಎಫ್, ಎನ್‌ಎಂಪಿಎ, ಮತ್ತು ಕದ್ರಿಯ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಢಾಯಿಸಿ ಬೆಂಕಿ ನಂದಿಸಿದೆ. ಆದರೆ ಸುಗಂಧದ್ರವ್ಯಕ್ಕೆ ಬೆಂಕಿ ತಗುಲಿ ಏಕಾಏಕಿ ಧಗಧಗನೇ ಉರಿದ ಪರಿಣಾಮ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.