


ಡೈಲಿ ವಾರ್ತೆ: 13/ಸೆ./2025


ಜಿಲ್ಲಾ ಸರ್ಜನ್ ಡಾ.ಎಚ್ ಅಶೋಕ್ ಅವರಿಗೆ ದೊಡ್ಡಣಗುಡ್ಡೆ ಯಂಗ್ ಮೆನ್ಸ್ ಅಸೋಸಿಯೇಷನ್ ನಿಂದ ಅಭಿನಂದನೆ

ಉಡುಪಿ: ಜಿಲ್ಲಾ ಸರ್ಜನ್ ಡಾ.ಎಚ್ ಅಶೋಕ್ ಅವರನ್ನು ದೊಡ್ಡಣಗುಡ್ಡೆ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಇಂದು ಅಭಿನಂದಿಸಲಾಯಿತು. ದೊಡ್ಡಣಗುಡ್ಡೆ ಮಸೀದಿ ಖತೀಬರಾದ ಖಾಸಿಂ ಸಅದಿ ಮತ್ತು ಸಮಾಜಸೇವಕ ರಫೀಕ್ ನೇತೃತ್ವದಲ್ಲಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಖತೀಬರು , ಡಾ.ಎಚ್ ಅಶೋಕ್ ಅವರು ಬಡಜನರ ಮತ್ತು ಬಡರೋಗಿಗಳ ಸೇವೆಯನ್ನು ಅತ್ಯಂತ ಮಾನವೀಯ ದೃಷ್ಟಿಯಿಂದ ಮಾಡುತ್ತಿದ್ದಾರೆ.ಇನ್ನಷ್ಟು ಕಾಲ ಅವರ ಸೇವೆ ಉಡುಪಿಯ ಜನರಿಗೆ ಬೇಕು.ದೇವರು ಅವರಿಗೆ ಆಯುಸ್ಸು ಮತ್ತು ಆರೋಗ್ಯ ಕರುಣಿಸಲಿ. ದೊಡ್ಡಣಗುಡ್ಡೆ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಅವರನ್ನು ನಾವು ಗೌರವಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.
ಸಮಾಜಸೇವಕ ಮತ್ತು ಯಂಗ್ ಮನ್ಸ್ ಅಸೋಸಿಯೇಷನ್ ಮುಖಂಡ ರಫೀಕ್ ಮಾತನಾಡಿ ,
ಡಾ.ಅಶೋಕ್ ಅವರು ಯಾವುದೇ ಸಂದರ್ಭದಲ್ಲೂ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ.ಮುಂದೆಯೂ ಅವರ ಸೇವೆ ಜನರಿಗೆ ಬೇಕು.ಇನ್ನಷ್ಟು ಕಾಲ ಅವರು ಇಲ್ಲೇ ಸೇವೆ ಮಾಡಿ ,ಇಲ್ಲೇ ನಿವೃತ್ತಿ ಆಗುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯಂಗ್ ಮೆನ್ಸ್ ಅಸೋಸಿಯೇಷನ್ ದೊಡ್ಡಣಗುಡ್ಡೆಯ ಸದಸ್ಯರಾದ ,ಮೊಹಮ್ಮದ್ ಖಾಸಿಂ ,ಜುನೈದ್ , ಮಹಮ್ಮದ್ ಮನ್ಸೂರ್ ,ಫೈಝಲ್ , ಇಮ್ರಾನ್ ,ಸಮೀರ್ ,ಬದ್ರುಲ್ಲ ,ಶಾಬುದ್ದೀನ್ , ಮನ್ಸೂರ್ , ಫಿರೋಝ್ ,ಮುನ್ನ ,ಅರ್ಷದ್ , ಅಬ್ದುಲ್ ರಹೀಂ ಮತ್ತಿತರರು ಉಪಸ್ಥಿತರಿದ್ದರು.
ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಕ್ಬರ್ ,ಕಾರ್ಯದರ್ಶಿ ರಹಿದ್ ,ಖಜಾಂಜಿ ನಝೀರ್ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.