ಡೈಲಿ ವಾರ್ತೆ: 15/ಸೆ./2025

ಸರ್ಕಾರಿ ಪ್ರೌಢಶಾಲೆ ಮಣೂರು ಪಡುಕೆರೆ ತಂಡ ಕಬ್ಬಡಿ ಪಂದ್ಯಾಟದಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಕೋಟ: ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಸಂಯೋಜನೆಯ ಉಡುಪಿ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕರ ಕಬ್ಬಡ್ಡಿ ಪಂದ್ಯಾಟದಲ್ಲಿ ಸರ್ಕಾರಿ ಪ್ರೌಢಶಾಲೆ ಮಣೂರು ಪಡುಕೆರೆ ತಂಡ ಪ್ರಶಸ್ತಿಯೊಂದಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ತಂಡದ ಬೆಸ್ಟ್ ರೈಡರ್ ಆಗಿ ಮಹಮ್ಮದ್ ಜಿಯಾದ್ ಹಾಗೂ ಆಲ್ರೌಂಡರ್ ಸಾಗರ್ ಶೆಟ್ಟಿ ವಿದ್ಯಾರ್ಥಿಗಳು ಪ್ರಶಸ್ತಿ ಪದಕ ಪಡೆದರು ತಂಡದ ತರಬೇತುದಾರರಾಗಿ ಚಂದ್ರಶೇಖರ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಂದೀಪ್ ಮಾರ್ಗದರ್ಶನ ನೀಡಿದರು.

ಶ್ರೀರಾಮ ಕುಂಜೇಶ್ವರ ಪ್ರೌಢಶಾಲೆ ರಾಮ ಕುಂಜ ಕಡಬದಲ್ಲಿ ನಡೆಯುವ ವಿಭಾಗ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿಯೂ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಆನಂದ ಸಿ ಕುಂದರ್ ಪ್ರವರ್ತಕರು ಗೀತಾನಂದ ಪೌಂಡೇಶನ್, ವಿವೇಕಾನಂದ ವಿ ಗಾಂವಕಾರ ಮುಖ್ಯ ಶಿಕ್ಷಕರು, ನಾಗರಾಜ ಎಸ್‌ಡಿಎಂಸಿ ಅಧ್ಯಕ್ಷರು ಶುಭ ಹಾರೈಸಿದ್ದಾರೆ.