ಡೈಲಿ ವಾರ್ತೆ: 15/ಸೆ./2025

ಬುಡಕಟ್ಟು ಕೊರಗರಿಗೆ ಪ್ರತ್ಯೇಕ ಒಳ ಮೀಸಲಾತಿ ಬೇಕು

ಕುಂದಾಪುರ: ಈ ದಿನ ಒಳಮೀಸಲಾತಿಗೆ ಸಂಬಂಧ ಪಟ್ಟಂತೆ ಮಕ್ಕಳ ಮನೆ ಕುಂಬಾಸಿಯಲ್ಲಿ ಸಭೆಯನ್ನು ನಡೆಸಲಾಯಿತ್ತು.

ಈ ಸಭೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ ಇದರ ಪ್ರಾಂಶುಪಾಲರಾದ ಜಯಪ್ರಕಾಶ್ ಶೆಟ್ಟಿಯವರು ಆಗಮಿಸಿ ಒಳಮೀಸಲಾತಿ ಕೊರಗ ಜನಾಂಗಕ್ಕೆ ಯಾಕೆ ಬೇಕು, ಇದರಿಂದ ಜನಾಂಗಕ್ಕೆ ಆಗುವ ಪ್ರಯೋಜನವೇನು, ಈ ಮೀಸಲಾತಿಯಿಂದ ನಮ್ಮ ಕೊರಗ ಸಮುದಾಯಕ್ಕೆ ರಾಜಕೀಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಏನು ಉಪಯೋಗ ಆಗುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿಕೊಟ್ಟರು.

ಈ ಒಳಮೀಸಲಾತಿಯ ಹೋರಾಟವನ್ನು ಸಮುದಾಯದ ಎಲ್ಲರನ್ನು ಒಗ್ಗೂಡಿಸಿಕೊಂಡು ಮಾಡಬೇಕು. ಮತ್ತು ಇದರ ಸಾಧಕ ಭಾದಕದ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆ ಸಮುದಾಯದಲ್ಲಿ ಆಗಬೇಕು. ಈ ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮತ್ತಾಡಿ ಸರ್ ಮುಖ್ಯಧಿಕಾರಿಗಳು ಸೋಮೇಶ್ವರ ಇವರು ಮಾತಾಡಿ ನಮ್ಮ ರಾಜ್ಯದಲ್ಲಿರುವ ಇತರ ST ಗಳು ರಾಜಕೀಯವಾಗಿ ತುಂಬಾ ಬಲಾಡ್ಯರಾಗಿದ್ದು ಆಳುವ ಸರಕಾರದ ಮೇಲೆ ಪ್ರಭಾವ ಬೀರುವ ಮಟ್ಟದಲ್ಲಿರುವುರಿಂದ ನಾವು PVTG ಯಲ್ಲಿದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಅಸ್ಪೃಶ್ಯರಲ್ಲಿಯೇ ಅಸ್ಪೃಶ್ಯರಾಗಿದ್ದು, ನಮ್ಮ ರಾಜಕೀಯ, ಶಿಕ್ಷಣ, ಉದ್ಯೋಗ ಇದರ ಸ್ಥಿತಿಗತಿಗಳ ಬಗ್ಗೆ ಸರಿಯಾದ ಅಂಕಿಅಂಶ ಇಟ್ಟು ಕೊಂಡು, ಈ ಮೀಸಲಾತಿ ಬಗ್ಗೆ ಒಂದು ಅಧ್ಯಯನ ಮಾಡಿ, ನುರಿತ ತಜ್ಞರ ಮಾರ್ಗದರ್ಶನವನ್ನು ಪಡೆದು ಇಡೀ ನಮ್ಮ ಸಮುದಾಯ ಈ ಒಳಮೀಸಲಾತಿಯ ತೀವ್ರತೆ ಅರ್ಥಮಾಡಿಕೊಂಡು ಎಲ್ಲರೂ ಒಂದಾಗಿ ಹೋರಾಟಕ್ಕೆ ಅಣಿಯಾಗಬೇಕು ಎಂದು ಕರೆಯನ್ನು ನೀಡಿದರು. ನವೀನ್ ಹೇರೂರು ಮಾತನಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರವನ್ನು ಮಾಡಬೇಕು ಅಂದರು. ಗಣೇಶ ಕುಂಬಾಸಿ ಮಾತನಾಡಿ ಹೆಚ್ಚು ಯುವಜನರು ಭಾಗವಹಿಸಿ ಜಿಲ್ಲೆಯ್ಯದೆಂತಾ ಒಂದು ಬೈಕ್ ರ್‍ಯಾಲಿಯನ್ನು ಸಂಘಟಿಸಬೇಕು ನಮ್ಮ ಜನರಿಗೆ ಮತ್ತು ಈ ಸಮಾಜಕ್ಕೆ ಕೊರಗರ ಈ ಬೇಡಿಕೆ ನ್ಯಾಯ ಸಮ್ಮತವಾಗಿರುವಂತದ್ದು ಮತ್ತು ಜಿಲ್ಲೆಯ ಎಲ್ಲಾ ಪಕ್ಷದ ನಾಯಕರ ಗಮನ ಸೆಳೆಯುವ ಕೆಲಸವನ್ನು ಮಾಡಿ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಹೇಳಿದರು.

ಪ್ರಸನ್ನ ಬೈಂದೂರು ಮಾತಾಡಿ ಪ್ರತಿ ಹಳ್ಳಿ ಕಾಲೋನಿಯ ಜನರಿಗೂ ಈ ವಿಚಾರವನ್ನು ಮುಟ್ಟಿಸುವ ಕೆಲಸ ಆಗಬೇಕು ಅಂದರು. ಗಣೇಶ ಬಾರ್ಕುರು ಮಾತಾಡಿ ಅತೀ ಶೀಘ್ರವಾಗಿ ನಮ್ಮ ಬೇಡಿಕೆ ಜಿಲ್ಲಾಡಳಿತದ ಮೂಲಕ ಸರಕಾರದ ಗಮನವನ್ನು ಸೆಳೆಯುವಂತೆ ಮಾಡುವ ಕೆಲಸ ಇಡೀ ನಮ್ಮ ಸಮುದಾಯ ಒಂದಾಗಿ ಮಾಡಿದಾಗ ಮಾತ್ರ ನಮ್ಮ ಹೋರಾಟಕ್ಕೆ ಒಂದು ಫಲ ಸಿಗಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಡಾ. ಬಾಬು ಬೆಳ್ತಂಗಡಿ, ಬಾಬು ಪಾಂಗಳ, ಮಂಗಳೂರು, ಉಡುಪಿಯ ಯುವಜನರು, ಸಮಾಜ ಭಾಂದವರು ಭಾಗವಹಿಸಿದರು, ಶೇಖರ್ ಮರವಂತೆ ಸ್ವಾಗತಿಸಿ, ಲಕ್ಶ್ಮಣ ಬೈಂದೂರು ವಂದಿಸಿದರು.