


ಡೈಲಿ ವಾರ್ತೆ: 22/ಸೆ./2025


ಕುಂದಾಪುರದ ನಿಶಾಲಿ ಯು ಕುಂದರ್ ಅವರಿಗೆ ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ 2025ರ ಗರಿ

ದೆಹಲಿಯ ಪ್ರತಿಷ್ಠಿತ DK Pageant ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವು ನಿಶಾಲಿ ಮುಡಿಗೇರಿಸಿಕೊಂಡಿದ್ದಾರೆ.
ನಿನ್ನೆ ದೆಹಲಿಯ ರ‌್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ನಡೆದ ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ 2025 ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡುವುದರ ಮೂಲಕ ಈ ಸಾಧನೆ ಮಾಡಿರುತ್ತಾರೆ. ಮಂಗಳೂರಿನಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಎಂ.ಎ ಜರ್ನಲಿಸಮ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಲಿ ಬೆಂಗಳೂರಿನ ಶ್ರೀ ನೀಧಿ ಕಾರ್ಪೊರೇಷನ್ ಸಂಸ್ಥೆಯ ರಾಜ್ಯ ಪ್ರಶಸ್ತಿ ಪುರಸ್ಕತ ಉಮೇಶ್ ಕುಂದರ್ ಹಾಗೂ ಶ್ರೀಮತಿ ಕುಂದಾಪುರ ಬರೆಕಟ್ಟು ಅವರ ಪುತ್ರಿಯಾಗಿರುತ್ತಾರೆ. ಸಮಾಜ ಸೇವಕ ಮತ್ತು ಮಂದಾರ್ತಿ ದೇವಸ್ಥಾನದ ಉದ್ಯೋಗಿ ಅಶೋಕ್ ಕುಂದರ್ ಇವರ ಸಹೋದರರ ಮಗಳು