ಡೈಲಿ ವಾರ್ತೆ: 23/ಸೆ./2025

ಕಾಪು: ಹಿಟ್ ಅಂಡ್ ರನ್ – ಸಂತೆಕಟ್ಟೆಯ ಯುವಕ ದಾರುಣ ಮೃತ್ಯು

ಉಡುಪಿ: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಹಿಟ್ & ರನ್ ನಡೆದಿದ್ದು ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಅನೂಶ್ ಭಂಡಾರಿ ( 21) ಸ್ಥಳದಲ್ಲೇ ಸಾವನ್ನಪ್ಪಿದ ಯುವಕ. ಕಳೆದ ತಡರಾತ್ರಿ ಈ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಅನೂಶ್ ಆರು ತಿಂಗಳ ಹಿಂದೆ ಉಡುಪಿಗೆ ಬಂದಿದ್ದರು. ಇವರು ಉಡುಪಿಯ ಸಂತೆಕಟ್ಟೆ ನಿವಾಸಿಯಾಗಿದ್ದಾರೆ.ಅನುಷ್ ಭಂಡಾರಿ, ಸೋಮವಾರ ರಾತ್ರಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತಕ್ಕೆ ಕಾರಣವಾದ ವಾಹನ ಸ್ಥಳದಿಂದ ಪರಾರಿಯಾಗಿದೆ. ಅಪಘಾತದ ನಂತರ ಬೇರೆ ವಾಹನಗಳು ದೇಹದ ಮೇಲೆ ಹರಿದಿರುವ ಸಾಧ್ಯತೆ ಇದ್ದು ಮೃತದೇಹ ಸಂಪೂರ್ಣ ನಜ್ಜು ಗುಜ್ಜಾದ ಸ್ಥಿತಿಯಲ್ಲಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.