ಡೈಲಿ ವಾರ್ತೆ: 23/ಸೆ./2025

ಬೈಂದೂರು ಶಾಸಕ ಗಂಟಿಹೊಳೆ ಮತ್ತು ಬಿಜೆಪಿ ರೈತ ಮುಖಂಡ ದೀಪಕ್ ಕುಮಾ‌ರ್ ಶೆಟ್ಟಿ ಮಧ್ಯೆ ಜಟಾಪಟಿ !

ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವಿವಾದ ತಾರಕಕ್ಕೇರಿದ್ದು, ಶಾಸಕ ಗಂಟಿಹೊಳೆ ಮತ್ತು ಬಿಜೆಪಿಯ ಮಾಜಿ ಮಂಡಲಾಧ್ಯಕ್ಷ, ರೈತ ಮುಖಂಡ ದೀಪಕ್ ಕುಮಾ‌ರ್ ಶೆಟ್ಟಿ ನಡುವೆ ಜಟಾಪಟಿ ನಡೆದಿದೆ.

ಬಿಜೆಪಿಯನ್ನು ಕಾಂಗ್ರೆಸ್ ಮಾಡಲು ಹೊರಟಿದ್ದೀರಾ ಎಂದು ಗುರುರಾಜ್ ಗಂಟಿಹೊಳೆ ಗರಂ ಆಗಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರು ನಾಯಕರು ತಳ್ಳಾಡಿಕೊಂಡಿದ್ದಾರೆ. ಮಣಿಪಾಲದ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಮಧ್ಯೆ ಈ ಜಟಾಪಟಿ ನಡೆದಿದೆ.
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಸಮ್ಮುಖದಲ್ಲೇ ಈ ಹೈಡ್ರಾಮಾ ನಡೆದಿದ್ದು ಬಳಿಕ ಸಂಸದ ರಾಘವೇಂದ್ರ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್ ರದ್ದುಗೊಳಿಸುವಂತೆ ದೀಪಕ್ ಕುಮಾರ್ ಶೆಟ್ಟಿ ಕೆಲದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತ ಸಂಘದ ಮೂಲಕ ಬೈಂದೂರು ಮತ್ತು ಉಡುಪಿಯಲ್ಲಿ ಪ್ರತಿಭಟನೆ ಕೂಡ ನಡೆದಿತ್ತು. ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಜಟಾಪಟಿ ನಡೆದಿದೆ.