ಡೈಲಿ ವಾರ್ತೆ: 24/ಸೆ./2025

ಜಾತಿ ಗಣತಿಯಲ್ಲಿ ಗಾಣಿಗ ಸಮುದಾಯಕ್ಕೆ ಸೂಚನೆ

ಕೋಟ: ರಾಜ್ಯ ಸರಕಾರದ ವತಿಯಿಂದ ಸಾಮಾಜಿಕ, ಅರ್ಥಿಕ ಗಣತಿ ( ಜಾತಿ ಗಣತಿ) ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಗಾಣಿಗ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದು ಎಂದು ಜಾತಿಯಲ್ಲಿ ಗಾಣಿಗ, ಉಪಜಾತಿಯಲ್ಲಿ ಸಹ ಗಾಣಿಗ ಎಂದು ನಮೋದಿಸಬೇಕು‌. ಆದರೆ ಸಮಾನಾಂತರ ಜಾತಿ ಎನ್ನುವ ಕಾಲಂನಲ್ಲಿ ಮಾತ್ರ ಸೋಮಕ್ಷತ್ರಿಯ ಎಂದು‌ ನಮೋದಿಸಬೇಕು. ಇದರಿಂದ ಮುಂದೆ 2- ಎ ನಡಿ ಮೀಸಲಾತಿ, ರಾಜಕೀಯ ಮೀಸಲಾತಿ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ಪಡೆಯಲು ಅನುಕೂಲ ವಾಗಲಿದೆ. ಸಮುದಾಯ ಬಾಂಧವರು ಈ ಬಗ್ಗೆ ಎಚ್ಚರಿಕೆ ವಹಿಸಿ ಗಣತಿದಾರರಿಗೆ ಮಾಹಿತಿ ನೀಡಬೇಕು ಎಂದು ಗಾಣಿಗ ಯುವ ಸಂಘಟನೆ ಕೋಟ ಘಟಕದ ಪರವಾಗಿ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.