


ಡೈಲಿ ವಾರ್ತೆ: 24/ಸೆ./2025


ಸಾಸ್ತಾನದಲ್ಲಿ UK PEARL MART ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದ ಪೋಸ್ಟರ್ ಬಿಡುಗಡೆ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿ ಅಕ್ಟೋಬರ್ 18 ರಂದು ಶುಭಾರಂಭ ಗೊಳ್ಳಲಿರುವ ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ.
ಇವರ UK PEARL MART ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದ ಪೋಸ್ಟರ್ ಬಿಡುಗಡೆಯನ್ನು ಸೆ.23 ರಂದು ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಆನಂದ ಸಿ. ಕುಂದರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಂದ್ರ ಆಚಾರ್ ಕೋಟ, ಸುಭಾಷ್ ಶೆಟ್ಟಿ ಗಿಳಿಯಾರು, ಗಣೇಶ್ ನೆಲ್ಲಿಬೆಟ್ಟು, ಮೀನುಗಾರ ಸೊಸೈಟಿ ನಿರ್ದೇಶಕರಾದ ರವೀಂದ್ರ ತಿಂಗಳಾಯ, ಉಡುಪಿಕಿನಾರ ಸಂಸ್ಥೆಯ ನಿರ್ದೇಶಕರಾದ ಸುದಿನ ಹಾಗೂ ಪ್ರಮುಖರು ಉಪಸ್ಥಿತರಿದ್ದರು.