



ಡೈಲಿ ವಾರ್ತೆ: 28/ಸೆ./2025

ಮಲ್ಪೆ: ತನ್ನ ಸಹಚರರಿಂದ ಬೆಳ್ಳಂಬೆಳಗ್ಗೆ ತಲ್ವರಿನೇಟಿಗೆ ಉಸಿರು ಚೆಲ್ಲಿದ ಸೈಫುದ್ದೀನ್ – ಮೂವರು ಕೊಲೆ ಆರೋಪಿಗಳ ಬಂಧನ

ಮಲ್ಪೆ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಪುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉಡುಪಿ ಬಡಗಬೆಟ್ಟು ಗ್ರಾಮ ಮಹಮದ್ ಫೈಸಲ್ ಖಾನ್(27), ಕುಂಜಿಬೆಟ್ಟು
ಮೊಹಮದ್ ಶರೀಫ್ (37), ಕಾಟಿಪಳ್ಳ ಅಬ್ದುಲ್ ಶುಕುರ್ ಇವರನ್ನು ಬಂದಿಸಲಾಗಿದೆ.
ಸೈಪುದ್ದಿನ್ ರಕ್ತ ಚರಿತ್ರೆ:
ತನ್ನ ತಂದೆ ಬೆಳೆಸಿದ್ದ ರೌಡಿಯನ್ನು ಹತ್ಯೆಗೈದು ರೌಡಿಸಂ ಜಗತ್ತಿಗೆ ಇಳಿದ ಆತ್ರಾಡಿಯ ಸೈಫುದ್ದೀನ್(52)ತನ್ನ ಸಹಚರರಿಂದಲೇ ಬೆಳ್ಳಂಬೆಳಗ್ಗೆ ತಲ್ವರಿನೇಟಿಗೆ ಕೊನೆಯುಸಿರು ಎಳೆದಿದ್ದಾನೆ.
1990 ದಶಕದಲ್ಲಿ ಅಂದಿನ ಜನತಾದಳದ ಮುಖಂಡ ಆತ್ರಾಡಿಯ ಅಬ್ದುಲ್ ಖಾದರ್ ತನ್ನ ಗರಡಿಯಲ್ಲಿ ಪುಂಡಲೀಕ ನಾಯಕ್‌ನನ್ನು ಬೆಳೆಸಿದ್ದರು. ಆತ್ರಾಡಿ ಭಾಗದಲ್ಲಿ ಬಹಳ ಧೈರ್ಯಶಾಲಿಯಾಗಿ ಹಲ್ಲೆ, ಬೆದರಿಕೆ, ಕೊಲೆಯತ್ನ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಪುಂಡಲೀಕನು ತಾನು ಬೆಳೆಸಿದ ಗುರು ಖಾದರ್ ಸಾಹೇಬರಿಗೆ ತಿರುಗಿಬಿದ್ದಿದ್ದನು.
ಇದನ್ನು ಸಹಿಸದ ಖಾದರ್ ಪುತ್ರ ಸೈಫುದ್ದೀನ್ 1997 ರಲ್ಲಿ ನಡುರಸ್ತೆಯಲ್ಲಿ ಪುಂಡಲೀಕನನ್ನು ಹತ್ಯೆಗೈದಿದ್ದ. ಅಲ್ಲಿಂದ ಪ್ರಾರಂಭವಾದ ಸೈಫುದ್ದೀನ್ ಕರಾಳ ಅಧ್ಯಯವು ಬೆದರಿಕೆ, ಕೊಲೆಯತ್ನ, ಮೂರು ಕೊಲೆ ಸಹಿತ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ.

2020 ಫೆ.10 ಮುಂಬೈ ಬಾರ್ ಮಾಲೀಕ, ಉತ್ತರ ಪ್ರದೇಶದ ವಶಿಷ್ಟ ಸತ್ಯನಾರಾಯಣ ಯಾದವ್‌ನವ ಬೆಳ್ಳಂಪಳ್ಳಿಯಲ್ಲಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸೈಫುದ್ದೀನ್ ಮತ್ತು ಜನತಾ ಕಾಲೋನಿಯ ಶರೀಫ್, ಜೋಕಟ್ಟೆಯ ಅವಿನಾಶ್ ಕರ್ಕೆರ ಹಾಗೂ ಅಬ್ದುಲ್ ಶುಕ್ರು ಆರೋಪಿಗಳಾಗಿದ್ದರು.
ಇಂದು ಇದೇ ಆರೋಪಿಗಳು ಸೈಫುದ್ದೀನ್‌ನನ್ನು ತನ್ನ ಮಣಿಪಾಲದ ಮನೆಯಿಂದ ಮಂಗಳೂರಿಗೆ ವ್ಯವಹಾರ ಮಾತುಕತೆ ಬಗ್ಗೆ ಕರೆದುಕೊಂಡು ಹೋಗುವ ಸಂಚು ರೂಪಿಸಿದ್ದರು. ಅದರಂತೆ ಸ್ನೇಹಿತರಾದ ಕುಕ್ಕಿಕಟ್ಟೆಯ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆಯ ಶರೀಫ್ ಸೈಫುದ್ದೀನ್‌ನ ಕೊಡವೂರಿನ ಮನೆಗೆ ಹೊರಟಿದ್ದರು.
ಆಗ ಸಿಟಿಬಸ್ ನಿಲ್ದಾಣ ಬಳಿ ಮಂಗಳೂರಿನ ಕೆಳಮಿಜಾರಿನ ಅಬ್ದುಲ್ ಶುಕ್ರು ಯಾನೆ ಅದ್ದು ಹತ್ತಿದ್ದರು. ಇದಕ್ಕೆ ಅತ ಯಾಕೆ ಎಂದು ಸೈಫುದ್ದೀನ್ ಪ್ರಶ್ನಿಸಿದ್ದರು. ಆಗ ಫೈಜಲ್ ಆತ ಬರಲಿ ಅವನಿಗೆ ಬೇರೆ ಯಾರು ಇದ್ದಾರೆ ನಮ್ಮ ಜೊತೆ ಬರಲಿ ಎಂದು ಕೊಡವೂರಿಗೆ ಕರೆದುಕೊಂಡು ಹೋಗಿದ್ದರು.

ಸೈಫುದ್ದೀನ್ ಕಾರಲ್ಲೇ ಇದ್ದ ಮಾರಕಾಸ್ತ್ರದಿಂದ ಸೈಫುದ್ದೀನ್ ತನ್ನ ಮನೆಯ ಬೀಗ ತೆಗೆದು ಒಳಹೊಕ್ಕುತ್ತಿದ್ದಂತೆ ಶುಕ್ರು ಬೆನ್ನಿಗೆ ಚುಚ್ಚಿದ್ದಾನೆ. ತಕ್ಷಣ ಶರೀಫ್ ತಲ್ವಾರ್‌ನಿಂದ ಸೈಫುದ್ದೀನ್‌ನ ತಲೆಗೆ ಬೀಸಿದ್ದಾನೆ. ಆಗ ಯಾವುದೇ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಲು ಆಗದ ಸೈಫುದ್ದೀನ್ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರು ಎಳೆದಿದ್ದಾನೆ. ಇದರಿಂದ ಆತ್ರಾಡಿಯ ಬಸ್ ಮಾಲೀಕನ ರಕ್ತಸಿಕ್ತ ಅಧ್ಯಾಯ ಕೊನೆಗೊಂಡಿದೆ.

ಸೈಫ್ ಅವರ ಪಾರ್ಥಿವ ಶರೀರವನ್ನು ಪೋಸ್ಟ್ಮಾರ್ಟಂ ಪ್ರಕ್ರಿಯೆ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು
ಸೈಫ್ ಅವರ ಮೃತ ದೇಹವನ್ನು ವಿಶೇಷವಾಗಿ ಸಜ್ಜುಗೊಳಿಸಿದ ಟೆಂಪೋದಲ್ಲಿ ಅತ್ರಾಡಿ ಮಸೀದಿಗೆ ಕರೆತರಲಾಯಿತು.
ಅವರೇ ಮಾಲೀಕರಾಗಿದ್ದ ಬಸ್ಸುಗಳು ಸಹ ಮೆರವಣಿಗೆಯಲ್ಲಿ ಸೇರಿಕೊಂಡಿದ್ದು,ಸಾವಿರಾರು ಮಂದಿ ಜನರ ಸಾಗರದ ನಡುವೆ ಅಂತಿಮ ಗೌರವ ಸಲ್ಲಿಸಿದರು.
ಅತ್ರಾಡಿ ಮಸೀದಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು.