



ಡೈಲಿ ವಾರ್ತೆ: 29/ಸೆ./2025

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಣಿಪಾಲ ಶಾಖೆ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

ಮಣಿಪಾಲ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಣಿಪಾಲ ಶಾಖೆ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮವು ಸೆಪ್ಟೆಂಬರ್ 26 ರಂದು ಶುಕ್ರವಾರ ಸಂಜೆ ಶಾಖೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾದ ಸಾಲ ವಸೂಲಾತಿ ವಿಭಾಗದ ಸಹಾಯಕ ಮಹಾಪ್ರಬಂಧಕರಾದ ಕರುಣಾಕರ ದಾಸ್ ಮಾತಾನಾಡಿ ಬಹುಬೇಗ ಬೆಳೆಯುತ್ತಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ತಾಹಕರು ಎದುರಿಸುತ್ತಿರುವ ಸವಾಲುಗಳು ಮತ್ತು ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರವಾಗಿ ತಿಳಿಸಿದರು. ಕೇಂದ್ರ ಸರಕಾರದ ಯೋಜನೆಗಳಾದ APY, PMJJBY ಮತ್ತು PMSBY ಬಗ್ಗೆ ಮಾಹಿತಿ ನೀಡಿದರು. ನಮ್ಮ ಬ್ಯಾಂಕಿನಲ್ಲಿ ಇರುವ ಯೋಜನೆಗಳಾದ ಅಪಘಾತ ವಿಮೆ ಬಗ್ಗೆ ಹಾಗೂ ವಿವಿಧ ಠೇವಣಿ ಹಾಗೂ ಸಾಲಗಳ ಬಗ್ಗೆ ಹಾಗೂ ಖಾತೆಗೆ ಅಧಾರ್ ಅಂಕ್ ಪ್ರಯೋಜನದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು. ಹಾಗೂ ಬ್ಯಾಂಕಿನಿಂದ ನೀಡಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಅಂಗಯ್ಯ ಖಾರ್ವಿ ಅವರು ಕೇಂದ್ರ ಸರಕಾರದ ಸೂರ್ಯ ಘರ್ ಯೋಜನೆ ಹಾಗೂ ಸೌರ ವಿದ್ಯುತ್ ಶಕ್ತಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ವ್ಯವಸ್ಥಾಪಕರಾದ ಸದಾಶಿವ ಕೊಠಾರಿ ಬಿ ವಹಿಸಿದ್ದರು
ಈ ಸಂದರ್ಭದಲ್ಲಿ ನವೋದಯ ಸ್ವ ಸಹಾಯ ಸಂಘಗಳ ವಲಯ ಮೇಲ್ವಿಚರಕಾರದ ಕೃಷ್ಣ ಸಾಲ್ಯಾನ್, ಸಂಘದ ಪೇರಕಿ ಗೀತಾ ಶೆಟ್ಟಿ, ಅಮಿತಾ ಹಾಗೂ ಶಾಖಾ ಸಿಬ್ಬಂದಿ ಪವಿತ್ರಾ ಮತ್ತು ಸೃಜನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ ವಂದಿಸಿದರು.