



ಡೈಲಿ ವಾರ್ತೆ: 29/ಸೆ./2025

ಅದ್ಭುತ ಪ್ರತಿಭೆಯ ಮೂಲಕ ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ 22ತಿಂಗಳ ಪುಟಾಣಿ ಅಮೃತಾ!

ಕೋಟ: ಅಮೃತಾ ಜಿ ದೇವಾಡಿಗ ವಿಶ್ವ ದಾಖಲೆ ಸಾಧನೆ ಮಾಡಿದ ಕರ್ನಾಟಕದ ಮಗಳು.
ಈ ಪುಟ್ಟ ಕಂದಮ್ಮ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಮೂಲದ ಗಜೇಂದ್ರ ಮತ್ತು ವನಿತಾ ಎಲ್ ದಂಪತಿಗಳ ಪುತ್ರಿ.

22 ತಿಂಗಳ ಪುಟ್ಟ ಕಂದಮ್ಮ ಅಮೃತಾ ಜಿ ದೇವಾಡಿಗ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಅದ್ಭುತ ಸಾಧನೆಗಳನ್ನು ಮಾಡಿ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಸ್‌ನಲ್ಲಿ ಹೆಸರು ದಾಖಲಿಸಿದ್ದಾಳೆ. ಅಮೃತಾ 100 ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸಿದ್ದು, 20ಕ್ಕೂ ಹೆಚ್ಚು ತರಕಾರಿಗಳು, 15ಕ್ಕೂ ಹೆಚ್ಚು ಹಣ್ಣುಗಳು, ,10ಕ್ಕೂ ಹೆಚ್ಚು ದಾನ್ಯಗಳು, A-Z, 1-10 ನಂಬರ್, 3.05 ಕೆ.ಜಿ ತೂಕವನ್ನು ಎತ್ತಿ “ಅತಿಹೆಚ್ಚು ತೂಕ ಎತ್ತಿದ ಮಗು” ಎಂಬ ದಾಖಲೆ ಸ್ಥಾಪಿಸಿದ್ದಾಳೆ.
110 ಮೀಟರ್ ಓಟವನ್ನು ಕೇವಲ 1 ನಿಮಿಷ 34 ಸೆಕೆಂಡ್‌ಗಳಲ್ಲಿ ಪೂರೈಸಿ “ಅತಿವೇಗವಾಗಿ 110 ಮೀಟರ್ ಓಟ ಮಾಡಿದ ಮಗು” ಎಂಬ ಸಾಧನೆ ಮಾಡಿದಾಳೆ. ಅಲ್ಲದೆ, ಮಾನವ ದೇಹದ 16 ಭಾಗಗಳನ್ನು ಗುರುತಿಸಿ, ಅನೇಕ ಕಾರು ಭಾಗಗಳನ್ನು ತಿಳಿದುಕೊಂಡು, ಸಂತೋಷ, ದುಃಖ, ಕೋಪ ಸೇರಿದಂತೆ ಅನೇಕ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಭಾವನಾತ್ಮಕ ಬುದ್ಧಿವಂತಿಕೆಯನ್ನೂ ತೋರಿಸಿದ್ದಾಳೆ.
24 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡ್‌ಗಳಲ್ಲಿ ಏರಿ “ಅತಿವೇಗವಾಗಿ ಮೆಟ್ಟಿಲೇರಿದ ಮಗು” ಎಂಬ ದಾಖಲೆಯನ್ನೂ ಹೊಂದಿದ್ದಾಳೆ. ಈ ಎಲ್ಲಾ ಸಾಧನೆಗಳ ಸಮೂಹದಿಂದ ಅಮೃತಾಳನ್ನು ನಿಜವಾದ ಬಹುಪ್ರತಿಭಾವಂತ ಮಗು ಎಂದು ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಸ್ ಗೌರವಿಸಿದೆ. NWR ದಾಖಲೆ ಸಂಖ್ಯೆ: IN24103422 ದಿನಾಂಕ: 22 ಸೆಪ್ಟೆಂಬರ್ 2025 ದಾಖಲಾಗಿದೆ.