



ಡೈಲಿ ವಾರ್ತೆ: 06/ಅ./2025

ಮಲ್ಪೆ| AKMS ಬಸ್ ಮಾಲಕ ಸೈಫ್ ಹತ್ಯೆ ಪ್ರಕರಣ: ಹನಿಟ್ರ್ಯಾಪ್ ಮಾದರಿಯಲ್ಲಿ ಕೊಲೆ ಸಂಚು!

ಉಡುಪಿ: ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ರೌಡಿ ಶೀಟರ್ ಬಸ್ಸುಗಳ ಒಡೆಯ
ಸೈಫ್ ಯಾನೆ ಸೈಫುದ್ದೀನ್ ಕೊಲೆ ಹನಿಟ್ರ್ಯಾಪ್ ಮಾದರಿಯಲ್ಲಿ ನಡೆದಿದೆ. ಆರೋಪಿ ಫೈಝಲ್ ಪತ್ನಿಯೂ ಅರೆಸ್ಟ್ ಆದ ಬಳಿಕ ಈ ಅಂಶ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಈ ಕೊಲೆ ಕೇಸ್ ಗೆ ಸಂಬಂಧಿಸಿ ಆರೋಪಿ ಮಹಮ್ಮದ್ ಪೈಝಲ್ ಪತ್ನಿ ರಿದಾ ಶಬಾನಳನ್ನೂ ಪೊಲೀಸರು ಬಂಧಿಸಿದ್ದರು.
ಕೊಲೆ ಆರೋಪದಲ್ಲಿ ಈಗಾಗಲೇ ಮೂವರ ಬಂಧನವಾಗಿತ್ತು, ಶಬಾನ ಬಂಧನದ ಬಳಿಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಹರಿರಾಂ ಶಂಕರ್ , ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಶಬಾನಳನ್ನು ಬಂಧಿಸಲಾಗಿದೆ.
ತನ್ನ ಪತ್ನಿಯ ಮೇಲೆ ಕೆಟ್ಟದೃಷ್ಟಿ ಹಾಕಿದ್ದಕ್ಕೆ ಕೊಲೆ ನಡೆಸಿದ್ದಾಗಿ ಆರೋಪಿ ಫೈಜಲ್ ಹೇಳಿದ್ದ. ಇದೇ ಕಾರಣಕ್ಕೆ ಸೈಫ್ ಕೊಲೆಯಲ್ಲಿ ತಾನು ಭಾಗಿಯಾಗಿದ್ದಾಗಿ ಹೇಳಿಕೆ ನೀಡಿದ್ದ. ಕೊಲೆಗೀಡಾದ ಸೈಫುದ್ದಿನ್ ಜೊತೆ ಒಂದು ವರ್ಷದಿಂದ ಶಬಾನಾಗೆ ಸಲುಗೆ ಇತ್ತು. ಸೈಫುದ್ದೀನ್ ಜೊತೆ ಚಾಟಿಂಗ್, ಫೋನ್ ಕಾಲ್, ಫೋಟೋ ಶೇರ್ ಮಾಡುತ್ತಿದ್ದಳು. ಪತ್ನಿ ಸೈಫುದ್ದೀನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಆರೋಪಿ ಫೈಜಲ್ ಗೂ ತಿಳಿದಿತ್ತು. ಇದೇ ಸಂದರ್ಭ ಬಳಸಿಕೊಂಡು ರಿಧಾಳನ್ನು ಬಳಸಿಕೊಂಡು ಫೈಝಲ್ ಕೊಲೆ ಸಂಚು ರೂಪಿಸಿದ್ದಾನೆ. ರಿಧಾ ನಿನಗೆ ಕಾಯುತ್ತಿದ್ದಾಳೆ ಎಂದು ಸೈಫ್ ಗೆ ಹೇಳಿ ಮಣಿಪಾಲದಿಂದ ಕೊಡವೂರಿನ ಮನೆಗೆ ಕರೆಸಿಕೊಂಡಿದ್ದ ರಿಧಾ ಶಬಾನ ಕೂಡ ನಾನು ಕೊಡವೂರಿನಲ್ಲಿ ಕಾಯುತ್ತಿದ್ದೇನೆ ಎಂದು ಹೇಳಿ ಕರೆಸಿಕೊಂಡಿದ್ದಳು.
ಪತ್ನಿಯ ಹೆಸರಲ್ಲಿ ಸುಳ್ಳು ಹೇಳಿ ಫೈಜಲ್ ಕೊಡವೂರಿನ ಸೈಫ್ ಮನೆಗೆ ಕರೆದೊಯ್ದು ಅಲ್ಲಿ ಮತ್ತಿಬ್ಬರ ಜೊತೆ ಸೇರಿ ಹತ್ಯೆ ಮಾಡಲಾಗಿತ್ತು. ಇಲ್ಲಿ ಶಬಾನ ಕೊಲೆಗೆ ಪ್ರೇರಣೆ ನೀಡಿದ್ದು ಆಕೆಯನ್ನು ಬಂಧಿಸಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.