ಡೈಲಿ ವಾರ್ತೆ: 24/ಅ./2025

ಎಸ್.ಡಿ.ಟಿ.ಯು ಮಂಗಳೂರು ನಗರ ನೂತನ ಜಿಲ್ಲಾಧ್ಯಕ್ಷರಾಗಿ ರಹಿಮಾನ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಬೆಂಗರೆ ಆಯ್ಕೆ

ಮಂಗಳೂರು ಅ24 : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ನಗರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಇರ್ಫಾನ್ ಕಾನರವರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು

2025-28 ರ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ರಹಿಮಾನ್ ಬೋಳಿಯಾರ್, ಉಪಾಧ್ಯಕ್ಷರಾಗಿ ಇರ್ಫಾನ್ ಕಾನ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಬೆಂಗರೆ, ಕಾರ್ಯದರ್ಶಿಯಾಗಿ ರಹಿಮಾನ್ ಮುನ್ನೂರು, ಕೋಶಾಧಿಕಾರಿಯಾಗಿ ಝುಬೈರ್ ಮಳಲಿ ಕಾರ್ಯ ಕಾರಿಣಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಇಡ್ಯಾ, ರಹೀಮ್ ಮುಲ್ಕಿ ಆಯ್ಕೆಯಾದರು

ಎಸ್ಡಿಟಿಯು ರಾಜ್ಯ ಸಂಚಾಲಕರಾದ ಅತಾವುಲ್ಲಾ ಜೋಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಘೋಷಣೆ ಮಾಡಿದರು

ಎಸ್ಡಿಟಿಯು ರಾಜ್ಯ ಕಾರ್ಯದರ್ಶಿ ಖಾದರ್ ಪರಂಗೀಪೇಟೆ, ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಸಾಲ್ಮರ, ದಕ್ಷಿಣ ಕನ್ನಡ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ದಕ್ಷಿಣ ಕನ್ನಡ ಆಟೋ ರಿಕ್ಷಾ ಚಾಲಕ ಮಾಲಕರ ಒಕ್ಕೂಟದ ಅಧ್ಯಕ್ಷ ಭಾರತ್ ಕುಮಾರ್, ಆಟೋ ರಾಜಕನ್ಮಾರ್ ಯೂನಿಯನ್ ಸ್ಥಾಪಕಾದ್ಯಕ್ಷ ಸಿದ್ದೀಕ್ ಮುಡಿಪು, ನಿವೃತ ಸೈನಿಕ ಮೊಹಮ್ಮದ್ ಜೆಪ್ಪು, ಎಸ್ಡಿಟಿಯು ದಕ್ಷಿಣ ಏರಿಯಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬಿಪಿ, ಮುಲ್ಕಿ ಯೂನಿಯನ್ ಅಧ್ಯಕ್ಷ ವಿಶುಕುಮಾರ್, ಸಂಶು ಮಲ್ಲಮಜಲ್ ಮತ್ತಿತರರು ಉಪಸ್ಥಿತರಿದ್ದರು ಮುಸ್ತಫಾ ಸ್ವಾಗತಿಸಿ ಅನ್ಸಾರ್ ಕುದ್ರೋಳಿ ಧನ್ಯವಾದಗೈದರು