



ಡೈಲಿ ವಾರ್ತೆ: 24/ಅ./2025

ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

ಬೆಂಗಳೂರು: ಉಸಿರುಗಟ್ಟಿಸಿ 7 ವರ್ಷದ ಬಾಲಕಿಯನ್ನು ಮಲತಂದೆ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿರಿ (7) ಕೊಲೆಯಾದ ಬಾಲಕಿ. ಮಲತಂದೆ ದರ್ಶನ್ ಎಂಬಾಂತ ಹತ್ಯೆ ಮಾಡಿದ್ದಾನೆ. ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಘಟನೆ ನಡೆದಿದೆ.
ಮೊದಲ ಗಂಡ ಮೃತಪಟ್ಟ ಮೇಲೆ ದರ್ಶನ್ ಜೊತೆ ಬಾಲಕಿಯ ತಾಯಿ ವಿವಾಹವಾಗಿದ್ದರು. ಹೆಂಡತಿ ಜೊತೆ ಗಲಾಟೆ ಮಾಡಿ ಮಗಳನ್ನ ಆರೋಪಿ ಹತ್ಯೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿ ದರ್ಶನ್ ಪರಾರಿಯಾಗಿದ್ದಾನೆ.