

ಡೈಲಿ ವಾರ್ತೆ: 31/ಅ./2025

ರಸ್ತೆಗೆ ಕಸ ಸುರಿಯುತ್ತಿದ್ದಾಗಲೇ ಸಿಕ್ಕಿಬಿದ್ದ ಯುವಕ| ನಗರ ಸಭೆ ಸಿಬ್ಬಂದಿಗೇ ಆವಾಜ್ – ಬೈಕ್ ವಶಕ್ಕೆ

ಚಿಕ್ಕಬಳ್ಳಾಪುರ: ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ಕಸದ ರಾಶಿ ಸುರಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ರಸ್ತೆಗೆ ತಂದು ಕಸ ಸುರಿದ ಯುವಕನ ಬೈಕ್ ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ದಂಡ ಕಟ್ಟದ ಯುವಕನ ಬೈಕ್ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರ ರಸ್ತೆಯಲ್ಲಿ ನಡೆದಿದೆ.
ಬೈಕ್ನಲ್ಲಿ ಕಸದ ಕವರ್ ತಂದು ರಸ್ತೆಗೆ ಯುವಕ ಸುರಿಯುತ್ತಿದ್ದ ವೇಳೆ ಆ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಕಸ ಹಾಕಿದ್ದಕ್ಕೆ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಯುವಕನ ಆವಾಜ್ ಹಾಕಿದ್ದಾನೆ. ಹೀಗಾಗಿ ಆತನ ಬೈಕ್ ಸೀಜ್ ಮಾಡಿ ಪಾಠ ಕಲಿಸಲಾಗಿದೆ.