ಡೈಲಿ ವಾರ್ತೆ: 05/DEC/2025

ಅಯ್ಯಪ್ಪ ಮಾಲಾಧಾರಿ ಮತ್ತು ಹಿಜಾಬ್ ವಿಷಯದಲ್ಲಿ ಶಿಕ್ಷಣ ಸಂಸ್ಥೆಯನ್ನು ಗುರಿಯಾಗಿಸಿ ರಾಜಕೀಯ ಮಾಡುವುದು ತಪ್ಪು – ಕಾಂಗ್ರೆಸ್ ಯುವ ನಾಯಕ ನಾಗೇಂದ್ರ ಪುತ್ರನ್ ಕೋಟ

ಕೋಟ: ಕೋಟದಲ್ಲಿರುವ ಪ್ರತಿಷ್ಟಿತ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಎರಡು ದಿನದ ಹಿಂದೆ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಶಾಲಾ ಪ್ರಿನ್ಸಿಪಾಲ್ ಹಲ್ಲೆ ಮಾಡಿದ್ದಾರೆ ಎಂದು ಅಯ್ಯಪ್ಪ ವ್ರತದಾರಿಗಳು ಮತ್ತು ಪೋಷಕರು ಶಾಲೆಗೆ ತೆರಳಿ ವಿಚಾರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೆಲವರು ಏರು ಧ್ವನಿಯಲ್ಲಿ ಚರ್ಚೆ ಮಾಡಿದ್ದಾರೆ, ಅಲ್ಲದೆ ಪೋಷಕರು ಮತ್ತು ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ಸೌಹಾರ್ದತೆಯಿಂದ ಪ್ರಕರಣವನ್ನು ಬಗೆಹರಿಸಿ ಕೊಂಡಿದೆ.

ಆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಇದುವರೆಗೂ ಯಾವುದೇ ಧರ್ಮ ಮತ್ತು ಜಾತಿ ತಾರತಮ್ಯ ಮಾಡಿದವರಲ್ಲ, ಮಕ್ಕಳ ಭವಿಷ್ಯದ ಹಿತದ್ರಷ್ಟಿಯಿಂದ ಶಾಲೆಯಲ್ಲಿ ಇಂತಹ ಸಣ್ಣ ಪುಟ್ಟ ಘಟನೆ ನಡೆಯುವುದು ಸಹಜ, ಆದರೆ ಮೂರು ವರ್ಷದ ಹಿಂದೆ ಉಡುಪಿ ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಹೆಸರಲ್ಲಿ ರಾಜಕೀಯ ಪ್ರೇರಿತ ವಿವಾದ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಪಡೆದದ್ದು ಉಡುಪಿಗೆ ಕಪ್ಪು ಚುಕ್ಕೆಯಾಗಿತ್ತು. ಹಾಗೆಯೇ ಈ ಪ್ರಕರಣ ಕೂಡ ರಾಜಕೀಯ ಬಣ್ಣ ಪಡೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಲಿಯಾಗಬಾರದು. ಶಾಲೆಯಲ್ಲಿ ವಸ್ತ್ರ ಸಂಹಿತೆ ಇದ್ದು ಅದನ್ನ ಪ್ರತಿ ವಿದ್ಯಾರ್ಥಿ ಕೂಡ ಅನುಸರಿಸ ತಕ್ಕದ್ದು, ಸಣ್ಣ ಪುಟ್ಟ ಸಮಸ್ಯೆ ಇದ್ದರೂ ಕೂಡ ಪೋಷಕರು ಅದನ್ನ ಶಾಲಾ ಆವರಣದಲ್ಲಿ ಬಗೆ ಹರಿಸಿ ಕೊಳ್ಳಬೇಕು, ಪತ್ರಿಕೆ ಮತ್ತು ಮಾಧ್ಯಮ ಮಿತ್ರರು ಕೂಡ ಇಂತಹ ಸುದ್ದಿಗಳಿಗೆ ವಿಶೇಷ ಮಹತ್ವ ನೀಡದೆ ಸೌಹಾರ್ದತೆಗೆ ಒತ್ತು ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಬೇಕಾಗಿ ಕೋಟ ನಾಗೇಂದ್ರ ಪುತ್ರನ್ ಮನವಿ ಮಾಡಿರುತ್ತಾರೆ.