
ಡೈಲಿ ವಾರ್ತೆ: 16//DEC/2025
ಅಕ್ರಮ ಮರಳುಗಾರಿಕೆ ಕುರಿತು ರೈತ ಮುಖಂಡ ಪ್ರವೀಣ್ ಹೆಬ್ಬಗೊಳಿ ಸವಾಲಿಗೆ ತಬ್ಬಿಬ್ಬಾದ KRIDL ಅಧಿಕಾರಿ

ಕುಂದಾಪುರ| ಉಡುಪಿ ಜಿಲ್ಲೆ ಕುಂದಾಪುರದ ಯುವ ರೈತ ಮುಖಂಡ ಪ್ರವೀಣ್ ಹೆಬ್ಬಗೊಳಿ ಅವರು ಕುಂದಾಪುರ ಮತ್ತು ಬ್ರಹ್ಮವಾರ ತಾಲೂಕಿನಲ್ಲಿ KRIDL ಅಧಿಕಾರಿ ವಿಜಯ್ ಅವರ ಮೂಲಕ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತು ಪ್ರಶ್ನಿಸಿದಾಗ, ಅಧಿಕಾರಿಯ ತಲೆಕೆಡಿಸುವ ಉತ್ತರಗಳು ಬಹಿರಂಗವಾಗಿವೆ.
ವಾಸ್ತವವಾಗಿ ಸರ್ಕಾರಿ ಕಾಮಗಾರಿಗಳಿಗೆ ಬಳಸಬೇಕಾದ ಮರಳನ್ನು “ಇದುವರೆಗೆ ಯಾವುದೇ ಸರ್ಕಾರಿ ಕಾಮಗಾರಿಗೆ ಮರಳು ನೀಡಿಲ್ಲ. ಒಪ್ಪಂದದಲ್ಲಿರುವ ಶೇಕಡಾ 25ರಷ್ಟು ಮರಳನ್ನು ವ್ಯವಹಾರದ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ” ಎಂಬ ಬಂಡಾಯಮಯ ಉತ್ತರ ನೀಡಿ, ಅಧಿಕಾರಿಯವರು ಸರ್ಕಾರದ ನೀತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಇದು ಮೂರು ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಮರಳು ದೆಕ್ಕೆಗಳ ಹಿಂದೆ ಇದ್ದಿರುವ ಅಕ್ರಮ ಜಾಲಕ್ಕೆ ಅಧಿಕಾರಿಯೇ ಪಾಲುದಾರ ಎನ್ನುವ ಶಂಕೆಗಳಿಗೆ ಆಧಾರ ನೀಡುತ್ತದೆ. ಜಿಲ್ಲೆಯಲ್ಲಿರುವ ಹಲವಾರು ಮೂಲಗಳಿಂದ ಈ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ.
KRIDL ಇಲಾಖೆಯ ನಾಮದಲ್ಲಿ ನಡೆಯುತ್ತಿರುವ ಈ ಅಕ್ರಮ ಮರಳುಗಾರಿಕೆ ಬಡಜನರ ಹಕ್ಕುಗಳನ್ನು ಹರಣ ಮಾಡುತ್ತಿದೆ ಹಾಗೂ ಸರಕಾರದ ಮರಳು ನೀತಿಯನ್ನೂ ಉಲ್ಲಂಘನೆ ಮಾಡುತ್ತಿದೆ.
ಈ ಹಿನ್ನೆಲೆ ಗಮನಿಸಿ ನಾವು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವನ್ನು ಮನವಿ ಮಾಡುತ್ತೇವೆ
ಈ ಅಧಿಕಾರಿಯನ್ನು ತಕ್ಷಣ ವಜಾಗೊಳಿಸಿ, ನ್ಯಾಯಸಮ್ಮತ ತನಿಖೆ ಕೈಗೊಂಡು ಬಡ ರೈತರು ಹಾಗೂ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು.