ಡೈಲಿ ವಾರ್ತೆ: 17//DEC/2025

ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಕುಮಾರಿ ಅಕ್ಷತಾ ಪೂಜಾರಿಗೆ ನ್ಯಾಯಕ್ಕಾಗಿ ನಡೆಯುವ ಪ್ರತಿಭಟನೆಗೆ ಕೋಟ ಸಂಘಟನೆಯಿಂದ ಬೆಂಬಲ – ಸದಾನಂದ .ಜಿ

ಕೋಟ: ನಮ್ಮ ಸಮಾಜದ ಕುವರಿ ಕುಮಾರಿ ಅಕ್ಷತಾ ಪೂಜಾರಿಯವರ ಮೇಲೆ ನಡೆದ ಪೋಲೀಸ್ ದೌರ್ಜನ್ಯ ಖಂಡಿಸಿ ,ಇನ್ನು ಮುಂದೆ ಸಮಾಜದ ಯಾವೊಬ್ಬರ ಮೇಲೆ ಅಮಾನುಷವಾಗಿ ಪೋಲಿಸ್ ಇಲಾಖೆ ನಡೆದುಕೊಳ್ಳದಂತೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ಇವರ ನೇತೃತ್ವದಲ್ಲಿ ಇಂದು ಅಪರಾಹ್ನ 3 ಗಂಟೆಗೆ ಬ್ರಹ್ಮಾವರ ಪೋಲಿಸ್ ಠಾಣೆಯ ಎದುರುಗಡೆ ನಡೆಯುವ ಬೃಹತ್ ಪ್ರತಿಭಟನೆಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ( ರಿ.) ಕೋಟ ಸಂಘಟನೆ ಸಂಪೂರ್ಣ ಬೆಂಬಲ‌ ಸೂಚಿಸಿದೆ ಮತ್ತು ಪ್ರತಿಭಟನೆಯಲ್ಲಿ ಕೋಟ ವ್ಯಾಪ್ತಿಯ ಬಿಲ್ಲವ ಸಮಾಜ ಪಾಲ್ಗೊಳ್ಳಲಿದೆ ಎಂದು ಕೋಟ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಸದಾನಂದ .ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.