ಡೈಲಿ ವಾರ್ತೆ: 23/DEC/2025

ಬಿರ್ತಿಯಲ್ಲಿ ಸದಸ್ಯ ಶಿಕ್ಷಣ ಯೋಜನೆಯ ಕ್ಲಸ್ಟರ್ ಮಾದರಿ ಸಹಕಾರ ತರಬೇತಿ ಕಾರ್ಯಕ್ರಮ

ಬ್ರಹ್ಮಾವರ: ಇತ್ತೀಚಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಉಡುಪಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಆದಿದ್ರಾವಿಡ ಸಹಕಾರ ಸಂಘ ನಿಯಮಿತ ತೆಂಕುಬಿರ್ತಿ ಬ್ರಹ್ಮಾವರ ಇವರ ಆಶ್ರಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಸಹಕಾರಿ ಯೂನಿಯನ್ ನ ಮುಖ್ಯಕಾರ್ಯನಿರ್ವಹಣ ಅಧಿಕಾರಿಯವರಾದ ಅನುಷಾ ಕೋಟ್ಯಾನ್ ಇಂಗ್ಲೆಂಡ್ ನಲ್ಲಿ ಕಾರ್ಮಿಕರ ಮೇಲಿನ ಧೌರ್ಜನ್ಯ ಮತ್ತು ಶೋಷಣೆ ವಿರುದ್ಧ ಹುಟ್ಟಿಕೊಂಡ ಚಳುವಳಿಯೇ ಸಹಕಾರ ಚಳುವಳಿ ಮುಂದೆ ಅದೇ ಸಹಕಾರ ಸಂಘಗಳ ಬೆಳವಣಿಗೆಗೆ ನಾಂದಿಯಾಯಿತು. ಕಾರ್ಮಿಕರು ತಾವು ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಾವೇ ಕೖಗಾರಿಕೆ , ಉಧ್ಧಿಮೆಗಳನ್ನು ನಡೆಸಲು ಆರಂಭಿಸಿದರು. ಇದು ಇಡೀ ಪ್ರಪಂಚಕ್ಕೆ ಮಾದರಿಯಾಯಿತು. ಇದೇ ಮಾದರಿಯನ್ನು ಅನುಸರಿಸಿಕೊಂಡು ಮುಂದೆ ಪ್ರಪಂಚದಾಧ್ಯಂತ ಸಹಕಾರ ಸಂಘಗಳು ಹುಟ್ಟಿಕೊಂಡವು ಎಂದರು.

ಇನ್ನೋಬ್ಬರು ಮುಖ್ಯ ಅತಿಥಿಗಳಾದ ವಿಶ್ವನಾಥ ಕಾರ್ಯಕ್ರಮದ ಉದ್ದೇಶ ತಿಳಿಸಿದರು.ಆದಿದ್ರಾವಿಡ ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು ತರಬೇತಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಆದಿದ್ರಾವಿಡ ಸಹಕಾರ ಸಂಘದ ಉಪಾಧ್ಯಕ್ಷರಾದ ವರ್ಣ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರ್ಧೇಶಕರಾದ ಜಗನ್ನಾಥ ಬಿರ್ತಿ , ಅನಿಲ ಬಿರ್ತಿ, ಪ್ರಶಾಂತ್ ಬಿರ್ತಿ, ಚೖತನ್ಯ ಬಿರ್ತಿ, ಸುಮನ , ಗಂಗೆ , ಅರುಣ ಪಾಡಿಗಾರ , ಸಂತೋಷ್ ಬಿರ್ತಿ , ಶಂಕರ, ಉಪಸ್ಥಿತರಿದ್ದರು. ಸಹಕಾರ ಸಂಘದ ಸ್ಥಾಪಕರಾದ ವಿಠಲ ನಿವ್ರತ್ತ ಅಧಿಕಾರಿಯವರು ಸೂಕ್ತ ಸಲಹೆ ಸೂಚನೆಯನ್ನು ನೀಡಿದರು. ಊರಿನ ಗಣ್ಯರಾದ ಬೋಜರಾಜ್ ಕಾವ್ರಾಡಿ, ಹರೀಶ್ಚಂದ್ರ ಕೆ. ಡಿ. , ಬಿರ್ತಿ ಸುರೇಶ , ಶಿವಾನಂದ ಬಿರ್ತಿ, ಮಮತಾ, ದ. ಸಂ. ಸ. ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಯವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಗೖದು ವಂದನಾರ್ಪಣೆ ನೆರವೇರಿಸಿದರು.