
ಡೈಲಿ ವಾರ್ತೆ: 23/DEC/2025
ಚರ್ಮರೋಗ ತಜ್ಞ ಡಾ. ಗಿರೀಶ್ ಗೆ
ಗಾಂಧಿ ಇಂಟರ್ನ್ಯಾಷನಲ್ ಫೀಸ್ ಅವಾರ್ಡ್

ಬೆಂಗಳೂರು; ಕಡಬಗೆರೆ ಗಾಂಧಿ ವೃದ್ಧಾಶ್ರಮದಲ್ಲಿ ನಡೆದ ಎಚ್ ಶಿವರಾಮೇಗೌಡ್ರ ಸಾರಿಥ್ಯದ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಶೈಕ್ಷಣಿಕ ಘಟಕ
ಮತ್ತು ಗಾಂಧಿನಗರ ಸಾಹಿತ್ಯ ಸೇವಾ ಸಂಸ್ಥಾನ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ ಗುಜರಾತ್ ಕರ್ನಾಟಕ ಘಟಕ ದಿಂದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ ಗಣ್ಯರಿಗೆ ಕರ್ನಾಟಕ ಶಿಕ್ಷಕ ರತ್ನ ರಾಜ್ಯಪ್ರಶಸ್ತಿ 2025 ಮತ್ತು ಗಾಂಧಿ ಇಂಟರ್ನ್ಯಾಷನಲ್ ಫೀಸ್ ಅವಾರ್ಡ್ 2025 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಎಸ್ಐ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ ಗಿರೀಶ್ ಅವರಿಗೆ ಗಾಂಧಿ ಇಂಟರ್ನ್ಯಾಷನಲ್ ಫೀಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ಎಸ್. ರಾಜಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್. ಶಿವರಾಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಬಸವರಾಜ್ ಮಾಲಗತ್ತಿ, ಸಮಾಜಿಕ ಕಾರ್ಯಕರ್ತ ಮಹೇಂದ್ರ ಮುನ್ನೋತ್ ನಟ ಗಣೇಶ ರಾವ್ ಸಮಾರಂಭವನ್ನು ಉದ್ಘಾಟಿಸಿದರು.
ಕರವೇ ಪದಾಧಿಕಾರಿಗಳಾದ ಅಬ್ದುಲ್ ನಾಸಿರ್, ಒಂದು ಕೋಟಿ ಮಂಜುಳಾ ವೆಂಕಟೇಶ್, ರತ್ನ, ಸುಮಾ ಬೋಳಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.